ಜಿಲ್ಲೆ

ಕಾಂಗ್ರೆಸ್ ತೆಕ್ಕೆಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್

ರಮೇಶ ಜಹಗೀರದಾರ್

ದಾವಣಗೆರೆ : ಕುತೂಹಲ ಮೂಡಿಸಿದ್ದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದು ಕೈ ಪಾಳಯ ಆಡಳಿತ ಚುಕ್ಕಾಣಿ ಹಿಡಿಯಲಿದೆ.
 ಒಟ್ಟು 13 ನಿರ್ದೇಶಕ ಸ್ಥಾನಗಳಿದ್ದು ಜೆ.ಆರ್. ಷಣ್ಮುಖಪ್ಪ ಮತ್ತು ವೇಣುಗೋಪಾಲ ರೆಡ್ಡಿ ಅವಿರೋಧ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು.
 ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರ ಪುತ್ರ ಡಿ.ಎಸ್. ಸುರೇಂದ್ರ, ಉದ್ಯಮಿ ಕೋಗುಂಡಿ ಬಕ್ಕೇಶಪ್ಪ ಗೆಲುವು ಸಾಧಿಸಿದ ಪ್ರಮುಖರು.
 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ 10 ಜನರು ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಆಡಳಿತವು ಕಾಂಗ್ರೆಸ್ ತೆಕ್ಕೆಗೆ ಜಾರಿದಂತಾಗಿದೆ.
 ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಹೈಸ್ಕೂಲ್ ಮೈದಾನ) ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. ನಂತರ ಮತಗಳ ಎಣಿಕೆ ನಡೆಯಿತು. ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿದ್ದರು. 526 ಮತದಾರರು ಇದ್ದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿ ಅನೇಕ ಜನಪ್ರತಿನಿಧಿಗಳು ಮತ ಚಲಾಯಿಸಿದರು.
 ...
 * ಚುನಾಯಿತರಾದವರು
 ಬಿ. ಕರಿಬಸಪ್ಪ (ದಾವಣಗೆರೆ ಎ ವರ್ಗ ಭಾಗ-2), ಡಿ.ಕುಮಾರ್ (ಹರಿಹರ ಎ ವರ್ಗ), ಜಿ.ಎಸ್. ಸಂತೋಷ್ (ಚನ್ನಗಿರಿ ಎ ವರ್ಗ ಭಾಗ 2). ಡಿ.ಎಸ್. ಸುರೇಂದ್ರ (ಹೊನ್ನಾಳಿ ಭಾಗ-1), ಡಿ.ಜಿ. ವಿಶ್ವನಾಥ್ (ಭಾಗ-2).
 ಕೋಗುಂಡಿ ಬಕ್ಕೇಶಪ್ಪ (ದಾವಣಗೆರೆ ಸಿ ವರ್ಗ), ಮುದೇಗೌಡ್ರ ಗಿರೀಶ್ (ಜಿಲ್ಲಾ ಇ ವರ್ಗ), ಸುರೇಶ್ ಕೆಂಚಮ್ಮನಹಳ್ಳಿ (ದಾವಣಗೆರೆ, ಜಗಳೂರು, ಹರಿಹರ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿ).
 ಎಚ್.ಕೆ. ಬಸಪ್ಪ ಕಂಚುಗಾರನಹಳ್ಳಿ (ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿ). ಬಿ. ಶೇಖರಪ್ಪ (ಎ ವರ್ಗದ ದಾವಣಗೆರೆ ತಾಲೂಕು ಭಾಗ-01), ಜಿ.ಎನ್. ಸ್ವಾಮಿ (ಎ ವರ್ಗದ ಚನ್ನಗಿರಿ ತಾಲೂಕು ಭಾಗ-01).
 ...