ದಾವಣಗೆರೆ: ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಅವರ 94ನೇ ಜನ್ಮದಿನದ ಪ್ರಯುಕ್ತ ಡಾ. ಎಸ್‌ಎಸ್‌ಎನ್‌ಪಿ ಶಾಲೆಯಲ್ಲಿ ಶನಿವಾರ ಸಂಸ್ಥಾಪಕರ ದಿನವನ್ನು ವಿನೂತನವಾಗಿ ಜನನ .
ಕಲಾವಿದ ರವೀಂದ್ರ ಅರಳಗುಪ್ಪಿ ಅವರು ಡಾ. ಶಾಮನೂರು ಶಿವಶಂಕರಪ್ಪ ಅವರ ನನ್ನ ಹೋಲುವ ವೇಷಭೂಷಣ ಧರಿಸಿ ಗಮನ ಸೆಳೆದರು. ಶಾಮನೂರು ಅವರಂತೆಯೆ ಬಿಳಿ ಬಣ್ಣದ ಉಡುಗೆ ತೊಟ್ಟು, ಅವರನ್ನೇ ಹೋಲುವಂತೆ ಮೇಕಪ್ ಮಾಡಿಕೊಂಡಿದ್ದ ಅವರು ಶಾಲೆಗೆ ಆಗಮಿಸಿದಾಗ ಡೀನ್ ಮಂಜುನಾಥ ರಂಗರಾಜು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅವರ ಸಮ್ಮುಖದಲ್ಲಿ ಶಾಲಾ ಮಕ್ಕಳಿಂದ ಸಭಾ ಚಟುವಟಿಕೆಗಳು ನಡೆದವು. ಕಲ್ಪಿತ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು, ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೀನ್ ಮಂಜುನಾಥ ರಂಗರಾಜು ಮಾತನಾಡಿ, ದಾವಣಗೆರೆ ಇಷ್ಟೊಂದುರ ಕಾಣಬೇಕಾದರೆ ಡಾ. ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರವಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅಪಾರ ಅಭಿವೃದ್ಧಿ ಮಾಡಿದ್ದರಿಂದ ದಾವಣಗೆರೆ ಅತ್ಯುನ್ನತ ಬೆಳವಣಿಗೆ ಕಂಡಿದೆ ಎಂದರು.