ಜಿಲ್ಲೆ

ಬೈಕ್‌ಗೆ ಕಾರು ಡಿಕ್ಕಿ, ಮಗು ಸೇರಿ ಇಬ್ಬರು ಸಾವು

ರಮೇಶ ಜಹಗೀರದಾರ್

ದಾವಣಗೆರೆ :  ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ಗುರುವಾರ ಸಂಜೆ ತ್ರಿಚಕ್ರ ವಾಹನಕ್ಕೆ ಕಾರ್ ಡಿಕ್ಕಿಯಾಗಿ ಮಗು ಸೇರಿ ಇಬ್ಬರು ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ.  ತೋಳಹುಣಸೆ ಗ್ರಾಮದ ಚಂದ್ರನಾಯ್ಕ (47) ಹಾಗೂ ಜಗಳೂರು ತಾಲೂಕು ನರಸಿಂಹರಾಜ ಪುರದ ಯುವ (2 ವರ್ಷ, 3 ತಿಂಗಳು) ಮೃತರು. ಗಾಯಗೊಂಡ ರೇಣುಕಾಬಾಯಿ ಮತ್ತು ಪ್ರೀತಂ ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಚಂದ್ರನಾಯ್ಕ ಮತ್ತು ರೇಣುಕಾಬಾಯಿ 3 ಗಾಲಿಯ ಬೈಕ್‌ನಲ್ಲಿ ನರಸಿಂಹರಾಜ ಪುರಕ್ಕೆ ಹೋಗಿದ್ದರು.  ಮಾರ್ಗ ಮಧ್ಯೆ ಗಾಂಧಿನಗರದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದರು. ಪ್ರೀತಂ, ಯುವ ಎಂಬ ಮಗುವನ್ನು ಕರೆದುಕೊಂಡು ಜತೆಯಲ್ಲೇ ಇದ್ದರು.  ಸಂಜೆ ದಾವಣಗೆರೆ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಚಂದ್ರನಾಯ್ಕ ಮತ್ತು ಯುವ ಸ್ಥಳದಲ್ಲೇ ಮೃತಪಟ್ಟರು. ರೇಣುಕಾಬಾಯಿ ಮತ್ತು ಪ್ರೀತಂ ಗಾಯಗೊಂಡರು.  ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.