ದಾವಣಗೆರೆ : ತಾಲೂಕಿನ 6ನೇ ಮೈಲಿಕಲ್ಲು ಬಳಿ ಗುರುವಾರ ರಾತ್ರಿ ಖಾಸಗಿ ಬಸ್ ಒಂದು ಬೈಕ್‌ಗೆ ಡಿಕ್ಕಿಯಾಗಿ ಹದಡಿ ಗ್ರಾಮದ ರಾಮಣ್ಣ (40) ಮತ್ತು ರಾಜಪ್ಪ ಎಂಬುವರು ಮೃತಪಟ್ಟಿದ್ದಾರೆ. ಗ್ರಾಮದ ವರ್ಷಾ ಪೆಟ್ರೋಲ್ ಬಂಕ್ ಮುಂದೆ ಈ ಘಟನೆ ನಡೆದಿದೆ. ನಿಯಂತ್ರಣ ಕಳೆದುಕೊಂಡ ಬಸ್ ಮನೆಯೊಂದಕ್ಕೆ ನುಗ್ಗಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಮನೆಗೆ ಹಾನಿಯಾಗಿದೆ. ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.