ಪುತ್ರಿ ಚಾಂದನಿಯೊಂದಿಗೆ ತಾಯಿ ಮಹಾದೇವಿ ಇಂಚಲ. 
ಜಿಲ್ಲೆ

ಪುತ್ರಿ ಕೊಂದು ಆತ್ಮಹತ್ಯೆಗೈದ ಮಹಿಳೆ

ಚನ್ನಮ್ಮನ ಕಿತ್ತೂರು: ಹೆತ್ತ ತಾಯಿ ತನ್ನ ಮಗಳೆನ್ನೇ ನೇಣು ಬಿಗಿದು ಹತ್ಯೆ ಮಾಡಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಂಡಲಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮಹಾದೇವಿ ನಾಯ್ಕಪ್ಪ ಇಂಚಲ (35) ಹಾಗೂ ಮಗಳು ಚಾಂದನಿ (6) ಮೃತಪಟ್ಟವರು. ತವರು ಮನೆಯಲ್ಲಿ ಐದಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ ಮಹಾದೇವಿಗೆ ಸಹೋದರ ರಂಗಪ್ಪ ಬಿಲ್ಯ್‌ರ ಹಾಗೂ ಪತ್ನಿ ಅನ್ನಪೂರ್ಣಾ ರಂಗಪ್ಪ ಬಿಲ್ಯ್‌ರ ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ತಿಳಿದುಬಂದಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.