ಮಂಡ್ಯ: ಡಾ.ಶಿವಕುಮಾರ ಮಹಾಶಿವಯೋಗಿಗಳು ಕಾಯಕ ಮತ್ತು ದಾಸೋಹವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಂತ ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಉದ್ಯಾನದಲ್ಲಿ ಕಾಯಕಯೋಗಿ ಫೌಂಡೇಷನ್ ಹಾಗೂ ಸಿದ್ದಗಂಗಾಶ್ರೀ ಸೇವಾ ಸಮಿತಿ ವತಿಯಿಂದ ಪ್ರತಿ ತಿಂಗಳು ನಡೆಸುವ ‘ದಾಸೋಹ ಹುಣ್ಣಿಮೆ’ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಹಸಿದು ಬಂದವರಿಗೆ ಅನ್ನ ನೀಡುವುದೇ ಧರ್ಮ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಸಿದ್ದಗಂಗಾ ಶ್ರೀಗಳು ಯಾವುದೇ ಜಾತಿ, ಧರ್ಮ, ವರ್ಣ, ಬೇಧಗಳೆನ್ನದೆ ಸರ್ವರಿಗೂ ಉಚಿತವಾಗಿ ಶಿಕ್ಷಣ, ಆಸರೆ, ದಾಸೋಹದಂತಹ ಮಹತ್ತರವಾದ ಸೇವೆಯನ್ನು ತಮ್ಮ 111 ವರ್ಷ ನಡೆಸಿದ ಮೇರುಪರ್ವತವಾಗಿದ್ದಾರೆ. ಸ್ವಾಮೀಜಿಯವರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಬೇಕಿದೆ ಎಂದರು.
ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಮಾತನಾಡಿ, ತ್ರಿವಿಧ ದಾಸೋಹ ಎಂದರೆ ಸ್ವಾಮೀಜಿ ಎನ್ನುವಷ್ಟರ ಮಟ್ಟಿಗೆ ಸಿದ್ದಗಂಗಾ ಶ್ರೀಗಳು ಸರ್ವ ಜನಾಂಗದವರಿಗೂ ಶಿಕ್ಷಣದ ಜತೆಯಲ್ಲೇ ಸಂಸ್ಕಾರವನ್ನು ಕಲಿಸಿಕೊಟ್ಟ ರಾಷ್ಟ್ರ ಸಂತರಾಗಿದ್ದಾರೆ. ಕೋಟ್ಯಂತರ ಜನರ ಭಾವಕೋಶದಲ್ಲಿ ನೆಲೆಯಾಗಿರುವ ಪರಮಪೂಜ್ಯರು ಕಾಯಕದ ಮೂಲಕ ದುಡಿಮೆ ಹಾಗೂ ದಾಸೋಹದಿಂದ ಅನ್ನದ ಮಹತ್ವವನ್ನು ತಿಳಿಸಿಕೊಟ್ಟ ಮಾತೃಹೃದಯಿ ಎಂದು ಬಣ್ಣಿಸಿದರು.
ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ, ವೀರಶೈವ ವಿದ್ಯಾರ್ಥಿ ನಿಲಯದ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಎಂ.ಎಸ್.ಮಂಜುನಾಥ್, ಶಿವಕುಮಾರ್, ಎಲ್.ಸಂದೇಶ್, ಜಿ.ಮಹಾಂತಪ್ಪ, ಶಿವರುದ್ರಪ್ಪ ಇತರರಿದ್ದರು. ಇದೇ ಸಂದರ್ಭದಲ್ಲಿ ದಾಸೋಹ ದಾನಿಗಳಾದ ವೀರಾಜಿಪುರದ ಮಹದೇವಪ್ಪ,