ದಸ್ಕತ್ ಸಿನಿಮಾ ನಿರ್ದೇಶಕ ಅನೀಷ್ ಪೂಜಾರಿ ವೇಣೂರು 
ಜಿಲ್ಲೆ

ಮೇ 9ಕ್ಕೆ ದಸ್ಕತ್ ಸಿನಿಮಾ ಬಿಡುಗಡೆ

ನವೀನ ಬಿ.ಎಂ

ಶಿವಮೊಗ್ಗ: ಜೈ ಬಜರಂಗಿ ಫಿಲ್ಮ್ಸ್‌ನಡಿ ದಸ್ಕತ್ ಕನ್ನಡ ಸಿನಿಮಾ ಮೇ 9ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಅನೀಷ್ ಪೂಜಾರಿ ವೇಣೂರು ಹೇಳಿದರು.

ದಸ್ಕತ್ ಮೂಲ ತುಳು ಸಿನಿಮಾ. ದಕ್ಷಿಣ ಕನ್ನಡ, ಉಡುಪಿ ಸೇರಿ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿ 70 ದಿನ ಪ್ರದರ್ಶನ ಕಂಡಿದ್ದು, ಇದೀಗ ಕನ್ನಡ ಆವೃತ್ತಿಯಲ್ಲೂ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಜಗದೀಶ್ ಎನ್. ಅರೆಬೆನ್ನಿಮಂಗಲ ಅವರ ಸಿನಿಮಾ ನಿರ್ಮಾಣ ಮಾಡಿದ್ದು, ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ ಎಂದರು.

ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ, ಗಣೇಶ್ ನೀರ್ಜಾಲ್ ಸಂಕಲನ, ಸಮರ್ಥನ್ ಎಸ್. ರಾವ್ ಸಂಗೀತ ನೀಡಿದ್ದಾರೆ. ನಾಯಕನಾಗಿ ದೀಕ್ಷಿತ್ ಕೆ. ಅಂಡಿಂಜೆ, ನಾಯಕಿಯಾಗಿ ಭವ್ಯಾ ಪೂಜಾರಿ, ಸ್ಮಿತೇಶ್ ಬಾರ್ಯ, ವಿನೋದ್‌ರಾಜ್ ಕಲ್ಕಂಜ, ನಿತಿಶ್ ಶೆಟ್ಟಿ, ಮನೋಜ್ ಆನಂದ್, ದೀಕ್ಷಿತ್ ಧರ್ಮಸ್ಥಳ, ರಕ್ಷಿತ್ ಜಾರಿಗೆದಡಿ, ಯುವ ಶೆಟ್ಟಿ, ಮೋಹನ್ ಶೇಣಿ, ಮಿಥುನ್‌ರಾಜ್, ದೀಪಕ್ ರೈ, ಚಂದ್ರಹಾಸ ಉಲ್ಲಾಳ, ಯೋಗೀಶ್ ಶೆಟ್ಟಿ, ನವೀನ್ ಬೊಂದೆಲ್ ಮತ್ತಿತರರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಪ್ರಾಕೃತಿಕ ಸೌಂದರ್ಯ, ಕರಾವಳಿ ಬದುಕು, ಸಂಸ್ಕೃತಿ ಸಂಘರ್ಷದ ಮನೋರಂಜನೆಯನ್ನು ಒಳಗೊಂಡ ಚಿತ್ರ ಇದಾಗಿದೆ. ದುಬೈ, ಮಸ್ಕತ್, ನೈಜಿರಿಯಾ, ಕೀನ್ಯಾದಲ್ಲೂ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ನಟ ದೀಕ್ಷಿತ್ ಕೆ. ಅಂಡಿಂಜೆ, ರಘು, ಪುನೀತ್, ಹರ್ಷದ್, ದೀಕ್ಷಿತ್ ಸುದ್ದಿಗೋಷ್ಠಿಯಲ್ಲಿದ್ದರು.