ಜಿಲ್ಲೆ

ಇಂದೇ ಜೈಲಿನಿಂದ ದಶರ್ನ್​​ ಬಿಡುಗಡೆ! ಕೋರ್ಟ್​​ ವಿಧಿಸಿದ ಷರತ್ತುಗಳೇನು ಗೊತ್ತಾ? Darshan Got An Interim Bail

ಬೆಂಗಳೂರು:  ( Darshan Got An Interim Bail ) ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ  ನಟ ದರ್ಶನ್​​ ಅವರು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ದರ್ಶನ್​​ ಜೈಲು ಸೇರಿದ್ದಾನೆ. ಅನಾರೋಗ್ಯ ಹಿನ್ನೆಲೆ  ಚಿಕಿತ್ಸೆಗಾಗಿ ಜಾಮೀನು ಬೇಕು ಎಂದು ದರ್ಶನ್​  ಕೋರ್ಟ್​​ ಮೆಟ್ಟಿಲೇರಿದ್ದರು.  ಇದೀಗ ದರ್ಶನ್​​ಗೆ  ಮಧ್ಯಂತರ ಜಾಮೀನು ಮಂಜೂರಿಯಾಗಿದೆ. ಇಂದೇ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಕೂಡಾ  ಮೂಲಗಳಿಂದ ತಿಳಿದು ಬಂದಿದೆ. ಕೋರ್ಟ್​​ ವಿಧಿಸಿದ ಷರತ್ತುಗಳೇನು? ಎನ್ನುವ ಮಾಹಿತಿ ಇಲ್ಲಿದೆ.

ಮುಂದಿನ 6 ವಾರಗಳ ಕಾಲ  ನಿಗಧಿತ ಅವಧಿಯ ಜಾಮೀನು ಮಜೂರು ಅಷ್ಟೇ.  ದರ್ಶನ್ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಅವಕಾಶ ನೀಡಲಾಗುತ್ತದೆ.  ಯಾವ ಚಿಕಿತ್ಸೆ ಆಗಿದೆ ಎಂದು ಕೋರ್ಟ್​​ಗೆ ರಿಪೋರ್ಟ್ ನೀಡಬೇಕು ಎನ್ನುವ ಷರತ್ತಿನ ಮೇಲೆ ಕೋರ್ಟ್ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್​​ಗೆ ಚಿಕಿತ್ಸೆಯ ಅನಿವಾರ್ಯತೆ ಇರುವ ಕಾರಣ ಮಧ್ಯಂತರ ಜಾಮೀನು ನೀಡಿದೆ. ಪಾಸ್​​ಪೋರ್ಟ್​ನ ಕೋರ್ಟ್​ಗೆ ಸರೆಂಡರ್ ಮಾಡಬೇಕು ಎಂದು ಕೋರ್ಟ್ ದರ್ಶನ್​ಗೆ ಸೂಚನೆ ನೀಡಿದೆ.

ಕೋರ್ಟ್​​ ತೀರ್ಪಿನ ಪ್ರಮುಖ ಅಂಶ:

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್​ಗೆ ಜೈಲಿನೊಳಗೆ  ರಾಜ ಮರ್ಯಾದೆ ನೀಡುತ್ತಿರುವ ವಿಚಾರ ದೃಶ್ಯ ಸಮೇತ ಬೆಳಕಿಗೆ ಬಂದಿತ್ತು. ಇದೇ ಕಾರಣಕ್ಕೆ ದರ್ಶನ್​​ನನ್ನು ಬಳ್ಳಾರಿ ಶಿಫ್ಟ್ ಮಾಡಲಾಯ್ತು.​ ಬಳಿಕ ದರ್ಶನ್​ಗೆ ಬೆನ್ನು ನೋವು ಜಾಸ್ತಿಯಾಗಿತ್ತು.

ಫಿಜಿಯೋಥೆರಪಿ ಚಿಕಿತ್ಸೆ ಪಡೆದರು. ಆದರೂ ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ ದರ್ಶನ್​ಗೆ ಆಪರೇಷನ್​ ಆಗತ್ಯವಿದ್ದು, ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ, ಇದರ ವಾದ-ಪ್ರತಿವಾದ ಮುಕ್ತಾಯವಾಗಿ, ಇಂದು ಕೋರ್ಟ್​ ತೀರ್ಪು ನೀಡಿದೆ.

ದರ್ಶನ್​ಗೆ ಮಧ್ಯಂತರ ಬೇಲ್​ ನೀಡಲೆಂದು ವಿಮ್ಸ್​ನ ಚಿಕಿತ್ಸಕ ವಿಭಾಗದ ಪ್ರೊಫೆಸರ್‌ ಮತ್ತು ಎಚ್‌ಒಡಿ ಎಸ್‌.ವಿಶ್ವನಾಥ್‌ ಸಹಿಯ 26 ದಾಖಲೆಗಳನ್ನು ಕೋರ್ಟ್​ಗೆ ನೀಡಲಾಗಿದೆ. ಇದರಲ್ಲಿ ಫಿಜಿಯೊಥೆರಪಿ, ನೋವು ನಿವಾರಕ, ನರದ ಉಪಚಾರಕ್ಕೆ ಔಷಧ ತೆಗೆದುಕೊಳ್ಳುವುದು. ಲಂಬಾರ್‌ ಬ್ರೇಸ್‌ (ಸೊಂಟಕ್ಕೆ ಕಟ್ಟುವ ಪಟ್ಟಿ) ಉಪಯೋಗಿಸುವುದರ ಕುರಿತು ಬರೆಯಲಾಗಿತ್ತು. ಈ ದಿಸೆಯಲ್ಲಿ ರೋಗಿಗೆ ಉಪಚಾರದ ಬಳಿಕ ಸ್ವಲ್ಪ ನೋವು ನಿವಾರಣೆಯಾಗಿದೆ. ಆದರೆ ಹೆಚ್ಚುವರಿ ಚಿಕಿತ್ಸೆಗಾಗಿ ಈಗ ಕೋರ್ಟ್​​ ದರ್ಶನ್​ಗೆ ಮಧ್ಯಂತರ ಜಾಮೀನು ನೀಡಿದೆ.

ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ.