ಜಿಲ್ಲೆ

ದಾಸವಾಣಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮರ 353 ನೇ ಉತ್ತರ ಆರಾಧನ ಮಹೋತ್ಸವದ ಅಂಗವಾಗಿ ಆ. 22 ರಂದು ರಾತ್ರಿ 7 ರಿಂದ 8.30 ರವರೆಗೆ ಪಂಡಿತ ಬಾಲಚಂದ್ರ ನಾಕೋಡ ಅವರು ದಾಸವಾಣಿ ಪ್ರಸ್ತುತಪಡಿಸುವರು.

ತಬಲಾ ಸಾಥಿದಾರರಾಗಿ ರಾಘವೇಂದ್ರ ನಾಕೋಡ, ಮನುಕುಮಾರ ಹಿರೇಮಠ, ಸಂವಾದಿನಿಗಾಗಿ ವಿಜಯಕುಮಾರ ಅರ್ಕಸಾಲಿ ಮತ್ತು ತಾಳ ವಾದ್ಯಕ್ಕಾಗಿ ಮನೋಹರ್ ಜೋಶಿ ಸಾಥ ನೀಡುವರು ಎಂದು ಮಠದ ಧರ್ಮದರ್ಶಿ ಗೋವಿಂದ ಆಚಾರ್ಯ ತಿಳಿಸಿದ್ದಾರೆ.