ಜಿಲ್ಲೆ

ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಾಸವಾಣಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಶಕ್ತಿ ಕಾಲನಿಯ ಸಂತೋಷ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜೂ. 27ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀದೇವಿ ರಮಾಕಾಂತ ಜೋಶಿ ಅವರು ದಾಸವಾಣಿ ಮತ್ತು ಭಕ್ತಿ ಸಂಗೀತ ನಡೆಸಿಕೊಡುವರು. ಅವರಿಗೆ ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ್ ಮತ್ತು ಹಾಮೋನಿಯಂ ಸಾಥಿದಾರರಾಗಿ ಮಂಜು ಗೋಕುಲ್ ಭಾಗವಹಿಸುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ತಿಳಿಸಿದ್ದಾರೆ.