ಜಿಲ್ಲೆ

ದಾಸವಾಣಿ ಕಾರ್ಯಕ್ರಮ 19ರಂದು

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಅಂಗವಾಗಿ ಆ. 19ರಂದು ಸಂಜೆ 7ರಿಂದ 8ಗಂಟೆಯವರೆಗೆ ಗಾಯಕ ಎಚ್. ಈಶ್ವರಪ್ಪ ದಾಸವಾಣಿ ಕಾರ್ಯಕ್ರಮ ನಡೆಸಿಕೊಡುವರು.

ತಬಲಾದಲ್ಲಿ ರಾಘವೇಂದ್ರ ನಾಕೋಡ್, ಚೇತನಕುಮಾರ್ ಇನಾಂದಾರ್, ಸಂವಾದಿನಿಯಲ್ಲಿ ವಿಜಯಕುಮಾರ್ ಅರ್ಕಸಾಲಿ ಮತ್ತು ತಾಳದಲ್ಲಿ ಮನೋಹರ ಜೋಶಿ ಸಾಥ್ ನೀಡುವರು. ಶಾಸಕ ಪ್ರಸಾದ ಅಬ್ಬಯ್ಯ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಮಠದ ಧರ್ಮದರ್ಶಿ ಗೋವಿಂದ ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.