ಜಿಲ್ಲೆ

ದಾಸವಾಣಿ ಭಕ್ತಿ ಸಂಗೀತ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಸಂತೋಷನಗರದ ಶಕ್ತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಏ. 3ರಂದು ಸಂಜೆ 6ಕ್ಕೆ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಡಾ. ಮಂಗಳ ಕಿನ್ನಾರ್ಕರ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು, ಮನುಕುಮಾರ ಹಿರೇಮಠ ತಬಲಾ, ಪಂ. ಅರುಣ ಜೋಶಿ ಹಾರ್ಮೋನಿಯಂ ಮತ್ತು ತಾಳ ವಾದ್ಯದಲ್ಲಿ ಮನೋಹರ ಜೋಶಿ ಸಾಥ್ ನೀಡಲಿದ್ದಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ಮನವಿ ಮಾಡಿದ್ದಾರೆ.