ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಅಂಗವಾಗಿ ಆ. 30ರಂದು ಸಂಜೆ 7ಗಂಟೆಯಿಂದ ರಾತ್ರಿ 8 ರವರಗೆ ದಾಸವಾಣಿ ಕಾರ್ಯಕ್ರಮ ಏರ್ಪಾಟಾಗಿದೆ.
ಗಾಯಕ ಎಚ್. ಈಶ್ವರಪ್ಪ ಅವರು ದಾಸವಾಣಿ ಪ್ರಸ್ತುತಪಡಿಸುವರು. ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ ತಬಲಾ, ವಿಜಯಕುಮಾರ ಅರ್ಕಸಾಲಿ ಹಾಮೋನಿಯಂ, ಮನೋಹರ ಜೋಶಿ ತಾಳ ಸಾಥ್ ನೀಡುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.