ಜಿಲ್ಲೆ

ಹರಿದಾಸ ಗಾನ ವೈಭವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪ ಶ್ರೀ ಕೃಷ್ಣ ದೇವರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಏರ್ಪಡಿಸಿರುವ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ ಮಹೋತ್ಸವದಲ್ಲಿ ಆ. 21ರಂದು ಮಧ್ಯಾರಾಧನೆ ಸಂಭ್ರಮದಿಂದ ನಡೆಯಲಿದೆ.

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಯ ದಿನ ಬುಧವಾರ ಸಂಜೆ 5.30ಕ್ಕೆ ಭಾರ್ಗವ ಸೇವಾ ದಳದ ಆಶ್ರಯದಲ್ಲಿ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕದ ಹೆಮ್ಮೆಯ ದಾಸರ ಪದಗಳ ಗಾಯಕ ಪಂ. ರಾಯಚೂರು ಶೇಷಗಿರಿದಾಸ ಅವರು ದಾಸವಾಣಿ ಪ್ರಸ್ತುತಪಡಿಸಲಿದ್ದಾರೆ.

ಇದಲ್ಲದೇ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ಜರುಗಲಿವೆ.

ಭಕ್ತರು ಹಾಗೂ ಸಂಗೀತ ಪ್ರಿಯರು ದಾಸವಾಣಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಂಗೀತ ಸುಧೆಯನ್ನು ಆಸ್ವಾದಿಸಿ, ಶ್ರೀ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ ಕೋರಿದ್ದಾರೆ.