ಹುಬ್ಬಳ್ಳಿ: ಇಲ್ಲಿಯ ಸಂತೋಷನಗರದ ಶಕ್ತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನ. 7ರಂದು ಸಂಜೆ 6ಕ್ಕೆ "ದಾಸವಾಣಿ ಮತ್ತು ಭಕ್ತಿ ಸಂಗೀತ' ಕಾರ್ಯಕ್ರಮವನ್ನು ವಿಜಯಕುಮಾರ ಹಿರೇಮಠ ನಡೆಸಿಕೊಡುವರು.
ಮನುಕುಮಾರ ಹಿರೇಮಠ ಮತ್ತು ವಿನಯ ಕಟ್ಟೆನ್ನವರ ತಬಲಾ, ವಿಜಯಕುಮಾರ ಅರ್ಕಸಾಲಿ ಹಾಮೋರ್ನಿಯಂ ಸಾಥ್ ನೀಡುವರು ಎಂದು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.