ಹುಬ್ಬಳ್ಳಿ: ಇಲ್ಲಿಯ ಸಂತೋಷನಗರ ಶಕ್ತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜ. 9ರಂದು ಸಂಜೆ 6ಕ್ಕೆ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆನಂದ ವಾಳ್ವೇಕರ್ ಅವರು ನಡೆಸಿಕೊಡಲಿದ್ದಾರೆ.
ಮನುಕುಮಾರ ಹಿರೇಮಠ ತಬಲಾ ಮತ್ತು ಕಿರಣ್ ಆಯಾಚಿತ್ ಹಾಮೋರ್ನಿಯಂ ಸಾಥ್ ನೀಡುವರು ಎಂದು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.