ಹುಬ್ಬಳ್ಳಿ: ಇಲ್ಲಿಯ ಸಂತೋಷನಗರದ ಶಕ್ತಿ ಕಾಲನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏ. 25ರಂದು ಸಂಜೆ 6ಕ್ಕೆ ದಾಸವಾಣಿ ಏರ್ಪಡಿಸಲಾಗಿದೆ.
ಜಯತೀರ್ಥ ತಸಗಾವ್ ಅವರು ದಾಸವಾಣಿ ನಡೆಸಿಕೊಡುವರು. ತಬಲಾ ಸಾಥಿದಾರರಾಗಿ ಮನುಕುಮಾರ್ ಹಿರೇಮಠ, ರಾಘವೇಂದ್ರ ನಾಕೋಡ್ ಮತ್ತು ಹಾಮೋರ್ನಿಯಂನಲ್ಲಿ ವಿಜಯಕುಮಾರ್ ಅರ್ಕಸಾಲಿ ಸಾಥ್ ನೀಡುವರು ಎಂದು ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.