ಮಾನ್ವಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾನವಿ ಹರಿದಾಸರು ಕೃತಿಯನ್ನು ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೆೇಂದ್ರತೀರ್ಥ ಪಾದಂಗಳವರು ಬಿಡುಗಡೆ ಮಾಡಿದರು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಲೇಖಕ ಡಾ.ವಿಜಯರಾವ್ ಕುಪನೇಶಿ ಇದ್ದರು. 
ಜಿಲ್ಲೆ

ದೇಶಕ್ಕೆ ದಾಸರ ಕೊಡುಗೆ ಅಪಾರ

ಗಾಯತ್ರಿ ಮಾಲಿಪಾಟೀಲ್

ಮಾನ್ವಿ: ದೇಶಕ್ಕೆ ದಾಸರ ಕೊಡುಗೆ ಅಪಾರ. ಅವರ ಸಾಹಿತ್ಯ ಬದುಕಿಗೆ ಅವಶ್ಯಕ ಎಂದು ಮಂತ್ರಾಲಯ ಗುರು ಸಾರ್ವಭೌಮ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ.ವಾದಿರಾಜಾಚಾರ್ಯ ಹೇಳಿದರು.

ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾನವಿ ಹರಿದಾಸರು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಾಸ ಸಾಹಿತಿ ಹಾಗೂ ನಿರ್ವೃತ್ತ ಪ್ರಾಚಾರ್ಯ ಡಾ.ವಿಜಯರಾವ್ ಕುಪನೇಶಿ ದಾಸರ ಕುರಿತು ಹಲವು ಲೇಖನಗಳನ್ನು ಬರೆದಿದ್ದಾರೆ. ಈಗ ಕೃತಿ ರೂಪದಲ್ಲಿ ಹೊರ ತಂದಿರುವುದು ಉತ್ತಮ ಕಾರ್ಯ. ತಾಲೂಕಿನ 40 ಹರಿದಾಸರ ಕುರಿತು ಸಂಶೋಧನೆ ನಡೆಸಿ ಮಾಹಿತಿ ಸಂಗ್ರಹಿಸಿ ಭಕ್ತರಿಗೆ ದಾಸರ ಪರಿಚಯ ಮಾಡಿಕೊಟ್ಟಿದ್ದಾರೆ. ಇಂಥ ಕೃತಿಗಳನ್ನು ಶಾಲಾ ಕಾಲೇಜುಗಳಲ್ಲಿ ಸಂಗ್ರಹಿಸಿ ಪಠ್ಯವನ್ನಾಗಿ ಅಳವಡಿಸಬೇಕು ಎಂದು ತಿಳಿಸಿದರು. ಮಠದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಪಂಡಿತ ದ್ವಾರಕಾನಾಥಾಚಾರ್ಯ, ಆರ್ಯವೈಶ್ಯ ಸಮಾಜದ ಮನ್ಸಾಲಿ ವೆಂಕಯ್ಯಶೆಟ್ಟಿ , ಮಠದ ವಿಚಾರಣಾ ಕರ್ತ ಮುದ್ದು ರಂಗರಾವ್ ಇದ್ದರು.