ಸಾಂದರ್ಭಿಕ ಚಿತ್ರ 
ಜಿಲ್ಲೆ

ದಸರಾ ಕಿರುಚಿತ್ರ ಸ್ಪರ್ಧೆ : ಅತ್ಯುತ್ತಮ ಕಿರುಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನ

ಮೈಸೂರು: ಕಿರುಚಿತ್ರಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಈ ಬಾರಿಯೂ ಕಿರುಚಿತ್ರಗಳ ಸ್ಪರ್ಧೆ ಆಯೋಜಿಸಿದ್ದು, ಅತ್ಯುತ್ತಮ ಕಿರುಚಿತ್ರ ಚಿತ್ರಮಂದಿರದಲ್ಲೂ ತೆರೆ ಕಾಣಲಿದೆ..!

ಕಿರುಚಿತ್ರದ ಅವಧಿಯು ಶೀರ್ಷಿಕೆ ಒಳಗೊಂಡೊಂತೆ 10 ರಿಂದ 15 ನಿಮಿಷಗಳ ಒಳಗೆ ಇರಬೇಕು. ಕಿರುಚಿತ್ರ ಯಾವುದೇ ಆನ್‌ಲೈನ್ ಮೀಡಿಯಾದಲ್ಲಿ ಬಿಡುಗಡೆಯಾಗಿರಬಾರದು. ಕಿರುಚಿತ್ರ 1-11-2-2023 ರಿಂದ 12-9-2024ರ ಅವಧಿಯೊಳಗೆ ನಿರ್ಮಾಣವಾಗಿರಬೇಕು. ಕಿರುಚಿತ್ರವನ್ನು ಗೂಗಲ್ ಡ್ರೈವ್‌ನಲ್ಲಿ ಅಪ್ಲೋಡ್ ಮಾಡಿ ಆ ಲಿಂಕ್ ಅನ್ನು ಅರ್ಜಿಯಲ್ಲಿ ನಮೂದಿಸಬೇಕು. ಯಾವುದೇ ಭಾಷೆಯ ಕಿರುಚಿತ್ರವನ್ನು ಸ್ಪರ್ಧೆಗೆ ಸಲ್ಲಿಸಬಹುದು.

ಸ್ಪರ್ಧೆಗೆ ಭಾಗವಹಿಸುವ ಎಲ್ಲ ಕಿರುಚಿತ್ರಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಆಯ್ಕೆಯಾಗುವ ವಿಜೇತ ಹಾಗೂ ಅತ್ಯುತ್ತಮ ಕಿರುಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು. ಆಯ್ಕೆಯಾಗುವ ಕಿರುಚಿತ್ರವನ್ನು ಮಾತ್ರ ಡಿಸಿಪಿ ಫಾರ್‌ಮೆಟ್‌ನಲ್ಲಿ ನೀಡಬೇಕಾಗುತ್ತದೆ. ಕಿರುಚಿತ್ರಗಳಿಗೆ ಉಪಶೀರ್ಷಿಕೆಗಳು ಕಡ್ಡಾಯ. ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಹಾಗೂ ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ.

ಈ ಮೇಲಿನ ಷರತ್ತುಗಳಂತೆ ಸಲ್ಲಿಕೆಯಾಗದೇ ಇರುವ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸದೆ ತಿರಸ್ಕರಿಸುವ ಅಧಿಕಾರ ಸಮಿತಿಗೆ ಇರುತ್ತದೆ. ಅತ್ಯತ್ತಮ 3 ಕಿರುಚಿತ್ರಗಳಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಗೌರವ ಸಲ್ಲಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಸೆ.12 ಕೊನೆಯ ದಿನ. ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ಅರ್ಜಿಯ ಲಿಂಕ್ ಪಡೆಯಬಹುದು. ಮಾಹಿತಿಗೆ ಮೊ: 7892543852 ಸಂಪರ್ಕಿಸಬಹುದು.