ಲಿಂಗಸುಗೂರು ಈಶ್ವರ ದೇವಸ್ಥಾನದಲ್ಲಿ ದಸರಾ ಧರ್ಮ ಸಮ್ಮೇಳನ ಪ್ರಯುಕ್ತ ವೀರಶೈವ ಜಂಗಮ ಸಮಾಜದ ಪೂರ್ವಭಾವಿ ಸಭೆ ಜರುಗಿತು. ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಯಲಗಲದಿನ್ನಿ, ಮುಖಂಡರಾದ ಮಹಾದೇವಯ್ಯ ಗೌಡೂರು, ಜಂಬಯ್ಯಸ್ವಾಮಿ ಹಿರೇಮಠ, ಮಹೇಶ ನಂದಿಕೋಲಮಠ, ನಾಗಯ್ಯ ಸೊಪ್ಪಿಮಠ, ಜಗದೀಶ ಸಾಲಿಮಠ, ಜಂಗಮಮೂರ್ತಿ, ಎನ್.ಬಸವರಾಜ, ಶರಣಯ್ಯ ದಾಸೋಹಮಠ, ವೀರಭದ್ರಯ್ಯ ಹಿರೇಮಠ, ಪಂಪಯ್ಯ, ವಿರುಪಾಕ್ಷಯ್ಯ ಹಿರೇಮಠ, ಶಿವಕುಮಾರ ನಂದಿಕೋಲಮಠ, ವೀರಭದ್ರಯ್ಯ ಇದ್ದರು. 
ಜಿಲ್ಲೆ

ದಸರಾ ಧರ್ಮ ಸಮ್ಮೇಳನ ಯಶಸ್ವಿಗೆ ಸಹಕಾರ ಅಗತ್ಯ

Kopala - Desk - Eraveni

ಲಿಂಗಸುಗೂರು: ಪಟ್ಟಣದಲ್ಲಿ ಅ.14 ರಿಂದ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಯಶಸ್ವಿಗೆ ಜಂಗಮ ಸಮುದಾಯದವರು ಭಕ್ತಿ ಸೇವೆ ಸಲ್ಲಿಸುವ ಮೂಲಕ ಸಹಕಾರ ನೀಡಬೇಕೆಂದು ವೀರಶೈವ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು ಮನವಿ ಮಾಡಿದರು.

ಭಾನುವಾರ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು, ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನವು ನಾಡಿನ ನಾನಾ ಜಿಲ್ಲೆಗಳಲ್ಲಿ ಪ್ರತಿವರ್ಷ ನಡೆಯುತ್ತ ಬರುತ್ತಿದೆ.

ಇದೀಗ 32ನೇ ದಸರಾ ಧರ್ಮ ಸಮ್ಮೇಳನ ಲಿಂಗಸುಗೂರು ತಾಲೂಕಿನಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಬಿನ್ನಾಭಿಪ್ರಾಯಗಳಿದ್ದರೂ ಬದಿಗಿಟ್ಟು ಎಲ್ಲ ಜಾತಿ ಜನಾಂಗದ ಮುಖಂಡರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮಸ್ಕಿ ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ ಮಾತನಾಡಿ, ದಸರಾ ಧರ್ಮ ಸಮ್ಮೇಳನವು ವೈವಿದ್ಯತೆಯಲ್ಲಿ ಏಕತೆಯ ಸಂದೇಶ ಸಾರುವ ಮತ್ತು ವೀರಶೈವ ಧರ್ಮ, ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕತೆಯ ಪ್ರತೀಕ.

ಸಮ್ಮೇಳನ ಯಶಸ್ವಿಗೆ ವೇದಿಕೆ, ಕುಡಿಯುವ ನೀರು, ಪ್ರಸಾದ ಸೇರಿ ಇತರೆ ವ್ಯವಸ್ಥೆಗಾಗಿ ಸಮಿತಿಗಳನ್ನು ರಚನೆ ಮಾಡಲಾಗಿದೆ ಮತ್ತು ಆಗಮಿಸುವ ಮಠಾಧೀಶರು ಮತ್ತು ಭಕ್ತ ಸಮೂಹಕ್ಕೆ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ನಾವೆಲ್ಲ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸುವ ಹೊಣೆಗಾರಿಕೆದೆ.