ಗದಗ ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ನವರಾತ್ರಿ ನಿಮಿತ್ಯ ಧ್ವಜಾರೋಹಣ ನೆರವೇರಿಸಲಾಯಿತು. ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು, ಪ್ರಕಾಶ ಬಂಡಿ, ಮಹೇಶ್ವರ ಶ್ರೀಗಳು ಹಲವರು ಇದ್ದರು. 
ಜಿಲ್ಲೆ

ಅಡವೀಂದ್ರ ಸ್ವಾಮಿ ಮಠದ ದಸರಾ ಜಾತ್ರಾ ಮಹೋತ್ಸವದ ಧರ್ಮ ಧ್ವಜಾರೋಹಣ

Gadag - Shivanand Hiremath

ವಿಜಯವಾಣಿಸ ಸುದ್ದಿಜಾಲ ಗದಗ
ನಾವಿಂದು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ. ದಾನ, ಧರ್ಮ, ಪರೋಪಕಾರ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸತಿ ನೀಡಬೇಕು. ಅಂದಾಗ ಮಾತ್ರ ಸುಂದರ ಕುಟುಂಬ, ಸಮಾಜದ ನಿರ್ಮಾಣಗೊಳ್ಳಲು ಸಾಧ್ಯ ಎಂದು ಅಡ್ನೂರ&ಗದುಗಿನ ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು ಹೇಳಿದರು.
ರವಿವಾರ ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ, ಶ್ರೀದೇವಿ ಪುರಾಣ ಪ್ರವಚನ, ಅನ್ನಪೂರ್ಣೆಶ್ವರಿ ದೇವಿ ಮಹಾರಥೋತ್ಸವದ ಅಂಗವಾಗಿ ಧರ್ಮ ಧ್ವಜಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಧಾಮಿರ್ಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸುವದು ಸಂಪ್ರದಾಯ. ಎಲ್ಲ ಕಾರ್ಯ ಚಟುವಟಿಕೆಗಳು ಧರ್ಮದ ಪಥದಲ್ಲಿ ನಡೆಯಲಿ ಎಂಬುದಾಗಿದೆ. ಕೆಲವೆಡೆ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಿದರೆ, ಪಂಚಪೀಠ ಪರಂಪರೆಯವರು ಪಂಚಪೀಠದ ಧ್ವಜಾರೋಹಣ ನೆರವೇರಿಸುವರು. ಹಳದಿ, ಬಿಳಿ, ಹಸಿರು, ಕೆಂಪು, ನೀಲಿ ಬಣ್ಣಗಳುಳ್ಳ ಈ ಧ್ವಜವು ಒಂದೊಂದು ಬಣ್ಣವು ಒಂದೊಂದು ಪೀಠದ ಅಧಿಪತಿಯನ್ನು ಸಂಕೇತಿಸುವದು ಎಂದರು.
ದಸರಾ ಅಂದರೆ ದೇವಿಯ ಆರಾಧನೆ, ದೇವಿ ಪುರಾಣ ಪಠಣ ಮಾಡುವದಾಗಿದೆ. ಒಂಭತ್ತು ದಿನಗಳ ಕಾಲ ತಾಯಿ ಜಗನ್ಮಾತೆಯನ್ನು ಸ್ಮರಿಸುವ, ಚರಿತ್ರೆಯನ್ನು ತಿಳಿದುಕೊಳ್ಳುವದಾಗಿದೆ. ಅರಿಷಡ್ವರ್ಗಗಳನ್ನು ಕಳೆದು ಸುಂದರ ಬದುಕನ್ನು ಕಟ್ಟಿಕೊಳ್ಳುವದಾಗಿದೆ. ದೇವಿ ಪುರಾಣ ಇದು ದೇಹದ ಪುರಾಣ ಎಂದು ಶ್ರೀಗಳು ಹೇಳೀದರು.
ಅಧ್ಯತೆ ವಹಿಸಿದ್ದ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯ ಪ್ರಕಾಶ ಬಂಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿ ವರ್ಷ ದೇವಿ ಪುರಾಣ, ಅನ್ನಪೂರ್ಣೆಶ್ವರಿ ಜಾತ್ರಾ ಮಹೋತ್ಸವವು ಸಕಲ ಸದ್ಭಕ್ತರ ಸಹಕಾರದೊಂದಿಗೆ ವೈಭವದಿಂದ ಸಾಗಿ ಬಂದಿದ್ದು ಈ ವರ್ಷವೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರಾ ಸಮಿತಿಯ ತಂಡವು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸನ್ನದ್ಧಗೊಂಡಿದೆ ಎಂದರು.
ಮಹೇಶ್ವರ ಶ್ರೀಗಳು, ಪ್ರಮೀಳಾದೇವಿ ಬಳಿಗಾರ, ಬಸವರಾಜ ಪಲ್ಲೇದ, ಶರಣಯ್ಯಶಾಸ್ತ್ರೀ ಶಿವಪ್ಪಯ್ಯನಮಠ, ವಿ. ಎಂ. ಕುಂದ್ರಾಳಹಿರೇಮಠ ಇದ್ದರು.