ಜಿಲ್ಲೆ

ದಸರಾ ದೀಪಾಲಂಕಾರ ಅವಧಿ ವಿಸ್ತರಣೆ : ರಾತ್ರಿ 11ರವರೆಗೂ ಜಗಮಗಿಸಲಿದೆ ಮೈಸೂರು

Mysuru

ಮೈಸೂರು: ಪ್ರತಿ ವರ್ಷವೂ ಸಂಜೆ 7ರಿಂದ 9ರವರೆಗೆ ಅಥವಾ 6.30 ರಿಂದ 9 ಗಂಟೆವರೆಗೆ ದೀಪಾಲಂಕಾರ ಇರುತಿತ್ತು. ಆದರೆ, ಈ ಬಾರಿ ರಾತ್ರಿ 6.30 ರಿಂದ 11 ಗಂಟೆವರೆಗೂ ದೀಪಾಲಂಕಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ದೀಪಾಲಂಕಾರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಒಂದೂವರೆ ಗಂಟೆ ಹೆಚ್ಚಿನ ಸಮಯದವರೆಗೆ ದೀಪಾಲಂಕಾರ ವೀಕ್ಷಿಸಲು ಅವಕಾಶ ದೊರೆಯಲಿದೆ.

ಸುಮಾರು ಒಂದೂವರೆ ಗಂಟೆಗಳ ಕಾಲ ವಿಸ್ತರಿಸಲಾಗುತ್ತದೆ. ಈ ಬಾರಿ ಸಂಜೆ 6.30ರಿಂದ 11ಗಂಟೆಯವರೆಗೆ ವಿದ್ಯುತ್ ದೀಪಾಲಂಕಾರಕ್ಕೆ ಅವಕಾಶ ಮಾಡಿಕೊಡಬೇಕೆಂಬ ಕಾರಣಕ್ಕಾಗಿ ಹೆಚ್ಚಿನ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಎಲ್‌ಇಡಿ ಬಲ್ಪ್‌ಗಳು, ವಿದ್ಯುತ್ ಉಳಿತಾಯ ಮಾಡುವ ಫ್ಯಾನ್ಸಿ ಬಲ್ಪ್‌ಗಳನ್ನು ಬಳಸಲಾಗುವುದು. ದೀಪಾಲಂಕಾರದ ಸಮಯ ವಿಸ್ತರಿಸುವ ಹಿನ್ನೆಲೆಯಲ್ಲಿ ವಿದ್ಯುತ್ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ ಎಂದು ಜಯವಿಭವ ಸ್ವಾಮಿ ಹೇಳಿದರು.