ವಿಟ್ಲ: ಕ್ರೀಡಾಪಟುಗಳು ಸೂರ್ತಿಯಿಂದ ಭಾಗವಹಿಸಿ, ಉತ್ತಮ ಸಾಧನೆ ಮೆರೆಯುವಂತಾಗಬೇಕು. ಮುಂದಿನ ದಿನದಲ್ಲಿ ತಾಲೂಕಿಗೆ ಹೆಸರು ತರುವ ಕಾರ್ಯ ಮಾಡಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಯುವಜನ ಒಕ್ಕೂಟ ಮತ್ತು ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಂಟ್ವಾಳ ತಾಲೂಕುಮಟ್ಟದ ದಸರಾ ಕ್ರೀಡಾಕೂಟ ೨೦೨೫-೨೬ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕಾರ್ಯನಿರ್ವಹಣಾಽಕಾರಿ ಸಚಿನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಕರುಣಾಕರ ವಿ., ಸಿಟಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸುದರ್ಶನ ಪಡಿಯಾರ್, ಯುವ ಸಬಲೀಕರಣ ಇಲಾಖೆಯ ರಜನಿ, ಕ್ರೀಡಾ ಇಲಾಖೆಯ ತರಬೇತುದಾರೆ ಸರಸ್ವತಿ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ರೈ ತುಂಬೆ, ಕಲ್ಲಡ್ಕ ವಲಯ ನೋಡಲ್ ಅಽಕಾರಿ ಜಗದೀಶ್ ಬಾಳ್ತಿಲ ಮತ್ತಿತರರು ಉಪಸ್ಥಿತರಿದ್ದರು.
ದಸರಾ ಕ್ರೀಡಾಕೂಟದ ನೋಡಲ್ ಅಽಕಾರಿ ರಾಜೇಂದ್ರ ರೈ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ವಂದಿಸಿದರು. ಜನಾರ್ದನ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.