ಜಿಲ್ಲೆ

ವಿದ್ಯಾರ್ಥಿಗಳು ಸಂಸ್ಕಾರವಂತರಾಗಲು ಸಂಸ್ಕೃತಿ ಸಹಕಾರಿ

ಎ. ಆರ್. ರಘುರಾಮ
  • ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳನ್ನು ಸಂಸ್ಕಾರವಂತರಾಗಿಸಲು ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಗೊಂಬೆ ಪ್ರದರ್ಶನ ಆಯೋಜನೆ ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
    ಇಲ್ಲಿನ ಭಾರತೀ ಕಾಲೇಜು(ಸ್ವಾಯತ್ತ), ಭಾರತೀ ಪದವಿ ಪೂರ್ವ ಕಾಲೇಜು ವತಿಯಿಂದ ನವರಾತ್ರಿ ಮಹತ್ವ ಸಾರುವ ನಿಟ್ಟಿನಲ್ಲಿ ಆಯೋಜಿಸಿದ್ದ ದಸರಾ ವೈಭವ ಬಿಂಬಿಸುವ ಭಾರತೀ ಬೊಂಬೆಗಳ ಪ್ರದರ್ಶನ-2023ಕ್ಕೆ ಚಾಲನೆ ನೀಡಿ ಮಾತನಾಡಿದರು.
    ವಿದ್ಯಾಭ್ಯಾಸದ ಜತೆಗೆ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಉಪನ್ಯಾಸಕರು ಗೊಂಬೆ ಪ್ರದರ್ಶನ ಆಯೋಜಿಸಿರುವುದು ಶ್ಲಾಘನೀಯ. ಮೈಸೂರು ದಸರಾ ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುತ್ತದೆ. ದಸರಾ ಎಂದರೇ ನಮ್ಮ ಜನರು ದೊಡ್ಡ ಹಬ್ಬವಾಗಿ ಸಂಭ್ರಮಿಸುತ್ತಾರೆ. ಮೈಸೂರು ರಾಜಮನೆತದಿಂದ ಆರಂಭವಾದ ದಸರಾ ದಿನೇ ದಿನೆ ತನ್ನ ವೈಭವ ಹೆಚ್ಚಿಸಿಕೊಳ್ಳುತ್ತಿದೆ ಎಂದರು.