ಜಿಲ್ಲೆ

ದಸರಾ ಆಹಾರ ಮೇಳ : ಗಮನ ಸೆಳೆಯಲಿದೆ ಬಂಬೂ ಬಿರಿಯಾನಿ

ಸದೇಶ್ ಕಾರ್ಮಾಡ್

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ದಸರಾ ಆಹಾರ ಮೇಳದಲ್ಲಿ ಈ ಬಾರಿಯೂ ಆದಿವಾಸಿಗಳು ತಯಾರಿಸುವ ಬಂಬೂ ಬಿರಿಯಾನಿ ಗಮನ ಸೆಳೆಯಲಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಕೃತಿ ಆದಿವಾಸಿ ೌಂಡೇಷನ್ ಟ್ರಸ್ಟ್ ಅಧ್ಯಕ್ಷ ಎಂ. ಕೃಷ್ಣಂ್ಯು, ಆದಿವಾಸಿಗಳು ತಯಾರಿಸುವ ಆಹಾರವನ್ನು ಜನರಿಗೆ ಉಣಬಡಿಸಲು ಬುಡಕಟ್ಟು ಶೈಲಿಂು ಕುಟೀರಗಳನ್ನು ನಿರ್ಮಿಸಲಾಗಿದೆ. ಬೆಂಕಿಯಿಂದ ಬೇಯಿಸಿದ ಬೊಂಬು ಬಿರಿಂಾನಿ, ಬಿದರಕ್ಕಿ ಪಾಯಿಸ, ವಾಕಳಿ ಬೇರಿನ ಟೀ, ಕಾಡುಗೆಣಸು, ಜೇನುತುಪ್ಪದ ಮಿಶ್ರಣ, ನಳ್ಳಿ ಸಾಂಬಾರು ಹಾಗೂ ಮುದ್ದೆ, ಕಾಡುನೆಲ್ಲಿಕಾಯಿ ವಿವಿಧ ಬಗೆಂು ಕಾಡು ಸೊಪ್ಪುಗಳಾದ ಆಲೆಸೊಪ್ಪು, ,ವಾಡಲೇ ಸೊಪ್ಪು, ತುಂಬೆ ಸೊಪ್ಪು, ಅಣ್ಣೆಸೊಪ್ಪು, ಇಂಡಿಸೊಪ್ಪು ಮುಂತಾದ ಸೊಪ್ಪಿನ ಪಲ್ಯಗಳನ್ನು ತಂಾರು ವಾಡಲಾಗುವುದು ಎಂದರು.

ಕಾಡುಕೊತ್ತಂಬರಿ ಸೊಪ್ಪು, ಕಾಡು ಶುಂಠಿ, ಕಾಡು ಅರಿಸಿಣ ಮಿಶ್ರಿತ ಮಸಾಲೆಯೊಂದಿಗೆ ವಿವಿಧ ಬಗೆಂು ನೈಸರ್ಗಿಕವಾದಂತಹ ಆರೋಗ್ಯ ಪೂರಕವಾದ ಔಷಧ ಗುಣ ಇರುವ ಆಹಾರಗಳನ್ನು ಸವಿಂುಲು ಆಹಾರ ಪ್ರಿಂುರು ಆದಿವಾಸಿ ಕುಟೀರಕ್ಕೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು.

ಕೊಡಗು ಜಿಲ್ಲೆ ಜಾನಪದ ಅಕಾಡೆಮಿ ಪುರಸ್ಕೃತರು ಹಾಗೂ ಗಿಡಮೂಲಿಕೆ ತಜ್ಞರಾದ ನಾಗಮ್ಮ ಅವರು ಸಹ ಆಹಾರ ಮೇಳದಲ್ಲಿ ಭಾಗವಹಿಸುತ್ತಿದ್ದು, ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಗಳಿಂದ ಗುಣಪಡಿಸಲಿದ್ದಾರೆ ಎಂದರು.