ಹಿರೀಸಾವೆಯಲ್ಲಿ ಸೋಮವಾರ ಚೌಡೇಶ್ವರಿ ದೇವಿಯ ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಬಾಲಕೃಷ್ಣ, ಕವಿಕಾ ಅಧ್ಯಕ್ಷ ಲಲಿತಾ ರಾಘವ್, ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಧರ್ಮದರ್ಶಿ ಎಚ್.ವಿ. ಫಣೀಶ್ ಇತರರು ಇದ್ದರು. 
ಜಿಲ್ಲೆ

ಹಿರೀಸಾವೆಯಲ್ಲಿ ದಸರಾ ಉತ್ಸವಕ್ಕೆ ಚಾಲನೆ

ಹಿರೀಸಾವೆ: ಇಲ್ಲಿನ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ನವರಾತ್ರಿ ಆಚರಣೆ ಮತ್ತು ದಸರಾ ಮಹೋತ್ಸವಕ್ಕೆ ಉಯ್ಯಲೆ ಕಂಬದಲ್ಲಿ ಸೋಮವಾರ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಚಾಲನೆ ನೀಡಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಈ ಗ್ರಾಮಕ್ಕೆ ಒಂದು ಸಾವಿರ ವರ್ಷದ ಹಿಂದೆ ನಿರ್ಮಾಣವಾಗಿರುವ ಉಯ್ಯಲೆ ಕಂಬವೇ ಸಾಕ್ಷಿ. ಗ್ರಾಮದ ಎಲ್ಲ್ಲ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಗೆ ಸಹಕಾರ ನೀಡುವೆ ಎಂದರು.

ಚನ್ನರಾಯಪಟ್ಟಣ ತಾಲೂಕಿನಲ್ಲಿ ಈ ವರ್ಷ ಮಳೆ ಕೊರತೆಯಿಂದರಾಗಿ, ತೆಂಗು ಸೇರಿದಂತೆ ಹಲವು ಬೆಳೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಗೋಪಾಲಸ್ವಾಮಿ ಮಾತನಾಡಿ, ದಸರಾ ಉತ್ಸವವು ನಮ್ಮ ದೇಶದ ಹಿಂದು ಧಾರ್ಮಿಕ ಆಚರಣೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಭಕ್ತಿ ಭಾವದಿಂದ ಸಪ್ತಮಾತೃಕೆ ದೇವಿಯರ ಪೂಜೆ ಮಾಡಬೇಕು ಎಂದರು. ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಎಚ್.ಸಿ.ಲಲಿತ ರಾಘವ್ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನವರಾತ್ರಿ ಆಚರಣೆ ನಡೆಯಲಿದೆ. ಅದ್ದೂರಿ ದಸರಾ ಯಶಸ್ವಿಗೆ ಗ್ರಾಮದ ಎಲ್ಲರು ಸಹಕಾರ ನೀಡಬೇಕು ಎಂದು ಧರ್ಮದರ್ಶಿ ಎಚ್.ವಿ. ಫಣೀಶ್ ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸೀಗೆ ಕೊಪ್ಪಲು ಬಿ.ಎನ್.ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಜಯಮ್ಮ ಬೋರಯ್ಯ, ಸದಸ್ಯರಾದ ಮಾರುತಿ ಮಂಜುನಾಥ್, ಬೋರಣ್ಣ, ಚೇತು, ಪಿಡಿಒ ಸತೀಶ್, ಪಿಎಸಿಸಿಬಿ ಅಧ್ಯಕ್ಷ ಮಹೇಶ್, ಸೊಸೈಟಿ ಹರೀಶ್, ದೇವಸ್ಥಾನ ಮುಖ್ಯಸ್ಥರಾದ ಅನಂತರಾಮಯ್ಯ, ಗ್ರಾಮದ ಮುಖಂಡರಾದ ಅರಳಿಮರದ ಕುಮಾರ್, ರಾಮಕೃಷ್ಣ, ಎಚ್.ಎಸ್. ರವಿಕುಮಾರ್, ಬಾಲಕೃಷ್ಣ ಉದಯಕುಮಾರ್, ಎಚ್.ಎಸ್.ಶ್ರೀಧರ್, ಮುರುಳೀಧರ್, ಎಚ್.ಜೆ. ದಿನೇಶ್, ಬೋರೇಗೌಡ, ವೆಂಕಟೇಶ್ ಬೀದಿಮನೆ ಶ್ರೀನಿವಾಸ್, ಕರವೇ ಮಹೇಶ್, ದಿವಾಕರ್, ವೀರಶೈವ ಸಮಾಜದ ಸಿದ್ದಲಿಂಗ ಸ್ವಾಮಿ , ರೈತ ಸಂಘದ ರಘು, ವಿಶ್ವಕರ್ಮ ಸಂಘದ ನಾಗೇಂದ್ರ ಇತರರು ಇದ್ದರು. ನವರಾತ್ರಿ ಉತ್ಸವಕ್ಕೆ ಚಾಲನೆ ಹಿನ್ನೆಲೆಯಲ್ಲಿ ಚೌಡೇಶ್ವರಿ ದೇವಿಗೆ ಮೊದಲ ದಿನ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.