ಜಿಲ್ಲೆ

ಪಟ್ಟಂದೂರು ಅಗ್ರಹಾರದಲ್ಲಿ ದಸರಾ ವೈಭವ

ಪಂಕಜ ಕೆ.ಎಂ.

ಬೆಂಗಳೂರು: ಮೈಸೂರಿನಲ್ಲಿ ವಿಜಯದಶಮಿಯಂದು ಜಂಬೂ ಸವಾರಿ ನಡೆಯುವ ಮಾದರಿಯಲ್ಲಿಯೇ ಬೆಂಗಳೂರು ಪೂರ್ವ ತಾಲೂಕಿನ ಪಟ್ಟಂದೂರು ಅಗ್ರಹಾರದಲ್ಲಿ ಮುನೇಶ್ವರ ಸ್ವಾಮಿ, ಶನೇಶ್ವರ ಸ್ವಾಮಿ, ಚೌಡೇಶ್ವರಿ ದೇವಿಯವರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಉತ್ಸವದಲ್ಲಿ ಪಟ್ಟಂದೂರು, ನಲ್ಲೂರಹಳ್ಳಿ, ಹಗದೂರು, ರಾಮಗೊಂಡನಹಳ್ಳಿ, ನಾಗೊಂಡನಹಳ್ಳಿ, ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗುಡಿ, ದಿನ್ನೂರು ಕಾಡುಗುಡಿ ಪ್ಲಾಂಟೇಷನ್, ಸದಾರಮಂಗಳ, ಹೂಡಿ, ಕುಂದಲಹಳ್ಳಿ, ಇಮ್ಮಡಿಹಳ್ಳಿ, ಗಾಂಧಿಪುರ ಮತ್ತಿತರ ಗ್ರಾಮದೇವತೆಗಳ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಉತ್ಸವದಲ್ಲಿ ಸ್ಥಳೀಯರಾದ ಆದಂತ ದಯಾನಂದ ಸಾಗರ್, ಕೇಬಲ್ ಲೋಕೇಶ್, ಕೆ. ಅರುಣ್‌ಕುಮಾರ್, ಪಟ್ಟಂದೂರು ಮುನಿರಾಜು, ಮಾಯಾಂಕ್ ಬಾಬು, ಭರತ್ ಗೋವಿಂದ್, ವಾಸುದೇವ್, ಕೇತನ್ ಕುಮಾರ್ ಇತರರಿದ್ದರು.