ಜಿಲ್ಲೆ

ನವರಾತ್ರಿ-ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರ ದಟ್ಟಣೆ ತಡೆಗೆ ಹೆಚ್ಚುವರಿ ರೈಲು

ಮಂಗಳೂರು: ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ತಡೆಯುವ ಸಲುವಾಗಿ ಸೆಂಟ್ರಲ್ ರೈಲ್ವೇ ಮತ್ತು ಸದರ್ನ್ ರೈಲ್ವೇ ಸಹಯೋಗದಲ್ಲಿ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಲಿದೆ.


ರೈಲು ಸಂಖ್ಯೆ 01185 / 01186 ಲೋಕಮಾನ್ಯ ತಿಲಕ್- ಮಂಗಳುರು ಜಂಕ್ಷನ್ -ಲೋಕಮಾನ್ಯ ತಿಲಕ್ ವಾರಕೊಂದು ವಿಶೇಷ ರೈಲು ಓಡಲಿದೆ. ರೈಲು ಸಂಖ್ಯೆ 01185 ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಅ.20ರಿಂದ ಪ್ರತೀ ಶುಕ್ರವಾರ ರಾತ್ರಿ 10.15ಕ್ಕೆ ಹೊರಡಲಿದೆ. ಮಂಗಳೂರು ಜಂಕ್ಷನ್‌ಗೆ ಸಂಜೆ 5.05ಕ್ಕೆ ತಲುಪಲಿದೆ.


ರೈಲು ಸಂಖ್ಯೆ 01186 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ವಾರಕ್ಕೊಂದು ವಿಶೇಷ ರೈಲು ಅ.21ರಿಂದ ಡಿ.2ರ ತನಕ ಮಂಗಳೂರು ಜಂಕ್ಷನ್‌ನಿಂದ ಸಂಜೆ 6.45ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 2.25ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ.


ಥಾಣೆ, ಪನ್ವೇಲ್, ರೋಹ, ಮಂಗಾನ್, ಚಿಪ್ಲೂನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕನಕವಲ್ಲಿ, ಸಿಂಧುದುರ್ಗ, ಕುಡಲ್, ಸಾವಂತವಾಡಿ ರಸ್ತೆ, ತಿವಿಂ, ಕರ್ಮಾಲಿ, ಮಡ್‌ಗಾನ್ ಜಂಕ್ಷನ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.


ಒಟ್ಟು 21 ಕೋಚ್‌ಗಳು, 2 ಟೈರ್ ಎಸಿ 1, 3 ಟೈರ್ ಎಸಿ 5 ಕೋಚ್‌ಗಳು, ಸ್ಲೀಪರ್ 8 ಕೋಚ್‌ಗಳು, ಜನರಲ್ 5 ಕೋಚ್‌ಗಳು, ಎಸ್‌ಎಲ್‌ಆರ್ 2 ಕೋಚ್‌ಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.