ಜಿಲ್ಲೆ

ದಾಸ ಸಾಹಿತ್ಯ ಎಲ್ಲರಿಗೂ ದಾರಿದೀಪ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಏರ್ಪಡಿಸಲಾಗಿತ್ತು.

ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಮಾತನಾಡಿ, ಕನಕದಾಸರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಅವರ ದಾಸ ಸಾಹಿತ್ಯ ಈಗಿನ ಹಾಗೂ ಮುಂದಿನ ಪೀಳಿಗೆಗೂ ದಾರಿದೀಪ ಎಂದರು.

ಮಾಜಿ ನಿರ್ದೇಶಕ ಡಾ.ಕೆ.ಎಫ್. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶೋಭಾ ಅವರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ಎಸ್. ರಾಜಾಶಂಕರ, ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ,

ಸಿಎಒ ರಮೇಶ ಕಳಸದ, ಅಂಜನಾ ಢವಳೇಶ್ವರ, ಆರ್‌ಎಂಒ ಡಾ. ನಾಗರಾಜ ಚಾಂದಿ., ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಸುನೀಲ ಬಿರಾದಾರ, ಡಾ. ವೆಂಕಟೇಶ ಮೊಗೇರ, ಡಾ. ರಾಜಕುಮಾರ ಹಿರೇಮಠ, ಶುಶ್ರೂಷಾ ಅಧೀಕ್ಷಕಿ ಪದ್ಮಾವತಿ ಟಿ., ನರ್ಸಿಂಗ್ ಕಾಲೇಜ್ ಪ್ರಾಚಾರ್ಯೆ ಅನ್ನಪೂರ್ಣ ಘಂಟಿಸಿದ್ದಪ್ಪನವರ ಇತರರು ಇದ್ದರು.