ಜಿಲ್ಲೆ

ಯಶಸ್ಸಿನತ್ತ ದೊಡ್ಡಬಳ್ಳಾಪುರ ಡೇರಿ, ಅನೇಕ ಸಿಬ್ಬಂದಿಗೆ ನಿವೃತ್ತಿ ಪರಿಹಾರ, ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಮರುಜೀವ

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ

ಬೆಂಗಳೂರು ಸಹಕಾರ ಹಾಲು ಒಕ್ಕೂಟದಡಿ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರ ಬಮುಲ್ ಡೇರಿ ಲಾಭ ಗಳಿಸುವ ಜತೆಗೆ ರೈತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ತಾಲೂಕಿನಲ್ಲಿ 199 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿನಿತ್ಯ 11,040 ಉತ್ಪಾದಕರಿಂದ ಸರಾಸರಿ 1.43 ಲಕ್ಷ ಲೀಟರ್ ಗುಣಮಟ್ಟದ ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವ ಜತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡುವ ಗುರಿ ಡೇರಿಯದ್ದಾಗಿದೆ.

ಅತಿ ಹೆಚ್ಚು ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಸಹಾಯಧನ, ರೈತರಿಗೆ 15 ದಿನಗಳಿಗೊಮ್ಮೆ ಬಟವಾಡೆ ಮಾಡಲಾಗುತ್ತಿದೆ. ಇದೆಲ್ಲದರ ಪರಿಣಾಮ ಕುಂಟುತ್ತಿದ್ದ ದೊಡ್ಡಬಳ್ಳಾಪುರ ಡೇರಿ ಇದೀಗ ಲಾಭದತ್ತ ಮುಖಮಾಡಿದೆ.

ನಿವೃತ್ತಿ ಪರಿಹಾರಧನ ೋಷಣೆ : ದಶಕಗಳ ಕಾಲ ವಿವಿಧ ಡೇರಿಗಳಲ್ಲಿ ಕೆಲಸ ಮಾಡಿದ್ದ ಅನೇಕ ಸಿಬ್ಬಂದಿ ನಿವೃತ್ತಿ ಪರಿಹಾರಕ್ಕಾಗಿ ಬೇಸತ್ತಿದ್ದರು. ಇದೀಗ ಪರಿಹಾರಧನ ಲಭಿಸಿದ್ದು, ಅವರೆಲ್ಲರೂ ಖಷಿಯಾಗಿದ್ದಾರೆ.

6.25 ಕೋಟಿ ರೂಪಾಯಿ ಅನುದಾನ: ಸಹಕಾರ ಸಂಘಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುವುದು ಕಷ್ಟಕರ. ಈ ನಡುವೆ ಒಂದೇ ವರ್ಷದಲ್ಲಿ ನಗರದ ಡೇರಿಗೆ 6.25 ಕೋಟಿ ರೂ. ಅನುದಾನ ಬಂದಿದೆೆ. ತಾಲೂಕಿನ 199 ಸಂಘಗಳ ಪೈಕಿ ಶೇ.98 ಡೇರಿಗಳು ಸ್ವಂತ ಕಟ್ಟಡ ಹೊಂದಿದ್ದು, ಪ್ರತಿಯೊಂದೂ ಲಾಭದಾಯಕವಾಗಿವೆ.

ಹೈನುಗಾರಿಕೆ ಎಂಬ ಸಂಜೀವಿನಿ: ಹಸು, ಕರುಗಳನ್ನೇ ನಂಬಿ ಡೇರಿಗಳಿಗೆ ನಿತ್ಯ ಹಾಲು ಪೂರೈಸುವ ರೈತರ ವೈದ್ಯಕೀಯ ವೆಚ್ಚ, ವಿಶೇಷ ಪರಿಹಾರ, ರೈತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಸತಿ ನಿಲಯ, ಸಿಬ್ಬಂದಿ ಮರಣಾನಂತರ ಪರಿಹಾರ, ಉದ್ಯೋಗ ಸೃಷ್ಟಿ ಹೀಗೆ ಕುಂಟುತ್ತ್ತ ಸಾಗುತ್ತಿದ್ದ ನಾನಾ ಯೋಜನೆಗಳು ವೇಗ ಪಡೆದುಕೊಂಡಿವೆ.

ರೈತರ ಅಭ್ಯುದಯಕ್ಕೆ ದುಡಿಯಲು ಅವಕಾಶ ಸಿಕ್ಕಿದೆ. ಸಹಕಾರ ಸಚಿವ, ಕೆಎಂಎಫ್ ಹಾಗೂ ಬಮುಲ್ ಅಧ್ಯಕ್ಷರ ಬಳಿ ನಿಖರ ಕಾರಣ ನೀಡಿ ಅನುದಾನ ಕೇಳಿದ್ದೇನೆ. ನನ್ನ ಕಾರ್ಯವೈಖರಿ ಮೆಚ್ಚಿ ಅನುದಾನ ನೀಡಲಾಗಿದೆ. ಕರೊನಾ ಸಂದರ್ಭದಲ್ಲೂ ಡೇರಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದೇ ಡೇರಿ ಉದ್ದೇಶ. ನಿವೃತ್ತಿ ಪರಿಹಾರಕ್ಕಾಗಿ ಅಲೆದಾಡುತ್ತಿದ್ದವರಿಗೆ ಪರಿಹಾರ ದೊರಕಿಸಿಕೊಟ್ಟಿದ್ದು ತೃಪ್ತಿ ತಂದಿದೆ. ಬಿ.ಸಿ. ಆನಂದ್ ಕುಮಾರ್, ಕೆಎಂಎಫ್ ಹಾಗೂ ಬಮುಲ್ ನಿರ್ದೇಶಕ ನಿವೃತ್ತಿ ಪರಿಹಾರ ಕೊಡಿಸಿ ಎಂದು ಹಿಂದಿನ ನಿರ್ದೇಶಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಈಗಿನ ನಿರ್ದೇಶಕರಿಗೆ ಮನವಿ ಮಾಡಿ ತಿಂಗಳೊಳಗೆ ಪರಿಹಾರ ಕೊಡಿಸಿದ್ದಾರೆ. ನಾಗರಾಜು, ನಿವೃತ್ತಿ ಪರಿಹಾರಧನ ಪಡೆದ ರೈತ