ರಾಯಚೂರು ಬಹುಕೋಟಿ ವಂಚನೆಯ ದರ್ವೇಶ ಗ್ರೂಪ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ ಸಾವಿರಕ್ಕೂ ಅಧಿಕ ಜನರು ಕಳೆದ ಒಂದು ವಾರದಿಂದ ತಮ್ಮ ಬಳಿಯ ಬಾಂಡ್ ಸೇರಿ ಇತರ ದಾಖಲಾತಿ ಸಲ್ಲಿಸಲು ನಗರದ ಸೆನ್ ಠಾಣೆಯ ಮುಂದೆ ರಾಯಚೂರು ನಗರ ಸೇರಿ ವಿವಿಧ ತಾಲೂಕು ಸೇರಿ ಯಾದಗಿರಿ, ಶಹಪುರು, ಹೈದ್ರಾಬಾದ್, ಗುರಮಿಟಕಲ್ ಸೇರಿ ವಿವಿಧ ಕಡೆಯಿಂದ ಆಗಮಿಸಿದ ನೂರಾರು ಜನ ಸರತಿಯಲ್ಲಿ ನಿಂತಿದ್ದು ಕಂಡು ಬಂದಿತು.
ಸರ್ಕಾರವು ಜೂ.23ರಂದು ಅಧಿಸೂಚನೆ ಹೊರಡಿಸಿದೆ. ಕಂದಾಯ ಇಲಾಖೆಯ ಉಪಕಾರ್ಯದರ್ಶಿ ಅನ್ವರ್ ಬಾಷಾ (ಭೂಮಾಪನ ಮತ್ತು ವಿಶೇಷ ಕೋಶ)ಅವರು ರಾಜ್ಯಪಾಲರ ಆದೇಶಾನುಸಾರ ಹೊರಡಿಸಿದ್ದು ಅಧಿಸೂಚನೆ ಜಾರಿಗೊಳಿಸಿ, ಸಿಐಡಿ ತನಿಖಾ ವರದಿಯಲ್ಲಿ ಠೇವಣಿದಾರರಿಗೆ ಮೆ.ದರ್ವೇಶ ಗ್ರೂಪ್ ಸಂಸ್ಥೆಯಿಂದ ವಂಚನೆಯಾಗಿರುವುದು ಸ್ಪಷ್ಟವಾಗಿರುವ ಹಿನ್ನೆಲೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ 2004(2005ರ ಕರ್ನಾಟಕ ಅಧಿನಿಯಮ 30)ಈ 3ನೇ ಪ್ರಕರಣದ(2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರ ಚಲಾಯಿಸುತ್ತಿರುವುದಾಗಿ ತಿಳಿಸಿದ್ದು,
ಅದರಂತೆ ಮೆ.ದರ್ವೇಶ್ ಗ್ರೂಪ್ ಗೆ ಸೇರಿದ ಎನ್ನಲಾದ ಸ್ಥಿರ ಮತ್ತು ಚರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅವಶ್ಯಕ ಎಂದು ಮನಗಂಡಿರುವುದಾಗಿ ತಿಳಿಸಿ ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ನಾನಾ ಕಡೆ ದರ್ವೇಶ್ ಸಂಸ್ಥೆ ಮತ್ತು ಪಾಲುದಾದರು, ನಿರ್ದೇಶಕರು, ಪ್ರವರ್ತ್ತಕರು, ವ್ಯವಸ್ಥಾಪಕರಿಗೆ ಸೇರಿದ ಎಲ್ಲ ಚರ ಹಾಗೂ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದ್ದರಿಂದ ಕಳೆದೊಂದು ವಾರದಿಂದಲೂ ಹಂತಹಂತವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಕನಿಷ್ಠ 3 ಲಕ್ಷದವರೆಗೆ ಹಣ ಹೂಡಿಕೆ ಮಾಡಿದವರಷ್ಟೆ ಅಲ್ಲ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದವರೂ ಸಹಿತ ಈ ದಾಖಲೆ ಠಾಣೆಗೆ ದಾಖಲೆ ಸಲ್ಲಿಸುವ ಸಾಲಿನಲ್ಲಿ ಇದ್ದರು.
ನ್ಯಾಯಾಲಯದ ಸೂಚನೆಯಂತೆ ಸಲ್ಲಿಸಿದ ಪಟ್ಟಿಯಲ್ಲಿದ್ದವರು ಸೆನ್ ಠಾಣೆಗೆ ಹೂಡಿಕೆ ಮಾಡಿದವರು ತಮ್ಮ ಗುರುತಿನ ಚೀಟಿ, ಆಧಾರ್, ಸಂಸ್ಥೆಯ