ಮುಳಬಾಗಿಲಿನ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ದೇವರ ದರ್ಶನ ಪಡೆದರು. ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್​, ಮುಖಂಡರಾದ ನಂದಿನಿ ಪ್ರವಿಣ್​, ಕೊತ್ತೂರು ಗೆಂಗಿರೆಡ್ಡಿ , ಎಚ್​.ಗೊಲ್ಲಹಳ್ಳಿ ಕೆ.ಸತೀಶ್​, ಆರ್​.ಎಸ್​.ಸುಹಾಸ್​, ಮಲ್ಲಿಕಾರ್ಜುನರೆಡ್ಡಿ, ಕಗ್ಗಿನಹಳ್ಳಿ ಶ್ರೀನಿವಾಸ್​, ಸಂಗೊಳ್ಳಿ ವೆಂಕಟೇಶ್​ ಇದ್ದರು. 
ಜಿಲ್ಲೆ

ಭಜರಂಗಿ ದರ್ಶನದಿಂದ ಸಂಕಷ್ಟಗಳು ದೂರ

ಕೋಲಾರ ಡೆಸ್ಕ್

ಮುಳಬಾಗಿಲು: ಮುಳಬಾಗಿಲಿನ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದರ್ಶನ ಪಡೆದರೆ ಎಂತಹ ಕಷ್ಟಗಳು ತಂತಾನೆ ದೂರವಾಗುತ್ತದೆ. ಇಂದು ಆಂಜನೇಯ ಸ್ವಾಮಿ ದರ್ಶನ ವೇಳೆ ವಿಶಿಷ್ಟ ಸಂಕೇತ ಲಭಿಸಿದೆ ಎಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ನಗರದ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ15 ವರ್ಷಗಳಿಂದ ಮುಕ್ಕೋಟಿ ದ್ವಾದಶಿ ಸೇರಿ ವಿಶೇಷ ಪೂಜಾ ದಿನಗಳಲ್ಲಿ ದೇವಾಲಯವನ್ನು ವಿಶೇಷ ಅಲಂಕಾರ ಮಾಡಿಕೊಂಡು ಬರಲಾಗುತ್ತಿದ್ದು, ಈಗ ಜೆಡಿಎಸ್​ ಶಾಸಕರಾಗಿರುವ ಸಮೃದ್ಧಿ ವಿ.ಮಂಜುನಾಥ್​ ಸಹ ಭಾಜನರಾಗಿದ್ದಾರೆ. ಪಕ್ಷಗಳು ಬೇರೆಯಾದರು ನಾವು ದೇವಾಲಯದ ವಿಷಯದಲ್ಲಿ ಒಂದಾಗಿ ಕಾರ್ಯನಿರ್ವಹಿಸುತ್ತೇವೆ. ಇಂದು ದೇವರು ಇನ್ನೂ ಬೇರೆ ದೇವಾಲಯದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಂಬ ಮುನ್ಸೂಚನೆ ನೀಡಿದ್ದು, ಸಮೃದ್ಧಿ ಮಂಜುನಾಥ್​ ಸಹ ಈ ಕಾರ್ಯ ಮುಂದುವರಿಸಲಿದ್ದಾರೆ. ಆಂಜನೇಯ ಸ್ವಾಮಿ ಮಹಿಮೆ ವಿಶ್ವಕ್ಕೆ ಸಾರಲಿದೆ ಎಂದರು.

ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗೋವು ಶಾಲೆಗೆ ಭೇಟಿ ನೀಡಿ ದೇಶೀಯ ಗೋವುಗಳ ಸಂರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ. ದೇವಾಲಯ ಎಲ್ಲ ರೀತಿಯಲ್ಲೂ ಅಭಿವೃದ್ಧಿನಗೊಳ್ಳಬೇಕು. ಇದನ್ನು ದೇವರೇ ಮಾಡಿಸಿಕೊಳ್ಳುತ್ತಾನೆ ಎಂದರು.

ಬದಲಾವಣೆ ಇಲ್ಲ: ರಾಜಕೀಯವಾಗಿ ಸಂಕ್ರಾಂತಿ ನಂತರ ಕೆಲವರು ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಬಗ್ಗೆ ಕೊತ್ತೂರು ಮಂಜುನಾಥ್​ ಪ್ರತಿಕ್ರಿಯಿಸಿ ಸದ್ಯಕ್ಕೆ ಅಂತ ಪರಿಸ್ಥಿತಿ ಉದ್ಭವವಾಗಿಲ್ಲ. ಅವರವರ ಪಕ್ಷಗಳಲ್ಲಿಯೇ ಇರುತ್ತಾರೆ. ಸಂಕ್ರಾಂತಿಯ ನಂತರ ತಾಲೂಕಿನ ಯಾವ ರಾಜಕೀಯ ಬದಲಾವಣೆಯೂ ಆಗುವುದಿಲ್ಲ ಎಂದು ಶಾಸಕರು ಸ್ಪಷ್ಟನೆ ನೀಡಿದರು.