ಜಿಲ್ಲೆ

ದಕ್ಷಿಣ ಕನ್ನಡಕ್ಕೆ ದರ್ಶನ್ ಎಚ್.ವಿ ಹೊಸ ಜಿಲ್ಲಾಧಿಕಾರಿ; ಮುಲ್ಲೈ ಮುಗಿಲನ್ ವರ್ಗಾವಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ

ಮುಲ್ಲೈ ಮುಗಿಲನ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ದರ್ಶನ್ ಎಚ್ ವಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ

ಮುಲೈ ಮುಗಿಲನ್ ಅವರಿಗೆ ಬೆಂಗಳೂರಿನಲ್ಲಿ ಇನ್ಸ್‌ಪೆಕ್ಟರ್ ಜನರಲ್‌ ಆಫ್‌ ರಿಜಿಸ್ಟ್ರೇಷನ್‌ ಆಂಡ್ ಸ್ಟಾಂಪ್ಸ್ ಆಯುಕ್ತರಾಗಿ ಹೊಸ ಹುದ್ದೆ ನೀಡಲಾಗಿದೆ.