ಸರಗೂರು: ತಾಲೂಕಿನ ಚಿಕ್ಕದೇವಮ್ಮ ಬೆಟ್ಟಕ್ಕೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶಿವನ ವಿಗ್ರಹ ಹಾಗೂ ಚಿಕ್ಕದೇವಮ್ಮ ಅಮ್ಮನವರಿಗೆ ನಮಿಸಿ, ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.
ನಂತರ ಮಾತನಾಡಿದ ಅವರು, ದಿ.ಆರ್.ಧ್ರುವನಾರಾಯಣ್ ಅವರು ಚಿಕ್ಕದೇವಮ್ಮ ಬೆಟ್ಟಕ್ಕೆ ಭೇಟಿ ನೀಡಿ, ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ನಾನು ಸಹ ದೇವರ ದರ್ಶನ ಪಡೆದು ಒಳಿತು ಮಾಡಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಚಿಕ್ಕದೇವಮ್ಮನಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಚಿಕ್ಕದೇವಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ದೇವರಾಗಿದ್ದಾರೆ ಎಂದು ಹೇಳಿದರು.
ದೇವಸ್ಥಾನದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ಅರ್ಚಕ ಉಪ್ಪಿ ಕುಂದೂರು, ಪ್ರಸನ್ನಕುಮಾರ್, ರವಿ, ಮನೋಹರ್, ಪುರದಕಟ್ಟೆ ಬಸವರಾಜು, ಪುಟ್ಟೇಗೌಡ, ಮಾರುತಿ, ದೆಗ್ಗಲ್ ಹುಂಡಿ ಮಹೇಶ್ ಇತರರು ಇದ್ದರು.