ಜಿಲ್ಲೆ

ಬೆಳಗಾವಿಯಲ್ಲಿ ಮುಂದುವರಿದ ಆಟೋ ಚಾಲಕರ ದರ್ಪ

ಜಗದೀಶ ಹೊಂಬಳಿ

ಬೆಳಗಾವಿ: ಗೋವಾ ಮಾಜಿ ಶಾಸಕ ಲಾವೋ ಮಾಮಲೇದಾರ್ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೋರ್ವ ಆಟೋ ಚಾಲಕನ ದರ್ಪ ತೋರಿರುವ ಘಟನೆ ನಡೆದಿದೆ.

ನಗರದ ಹಳೇ ಪಿ.ಬಿ. ರಸ್ತೆಯ ಜೀಜಾಮಾತಾ ವೃತ್ತದಲ್ಲಿ ಸೋಮವಾರ ಬೈಕ್ ಸವಾರರ ಮೇಲೆ ಆಟೋ ಚಾಲಕ‌ ದರ್ಪ ತೊರಿದ್ದಾರೆ. ವಯಸ್ಸಾದ ತಂದೆಯ ಎದುರೇ ಮಗನ ಮೇಲೆ ಆಟೋ‌ಚಾಲಕ ಹಲ್ಲೆ ಮಾಡಿದ್ದಾನೆ. ಆಟೋ ಚಾಲಕನ ವರ್ತನೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಂತೆ ಆಟೋ ಬಿಟ್ಟು ಚಾಲಕ ಪರಾರಿಯಾಗಿದ್ದು, ಬೆಳಗಾವಿಯ ಮಾರ್ಕೆಟ್ ಠಾಣೆ ‌ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.