ಜಿಲ್ಲೆ

ಮೌಲ್ಯಯುತ ವಚನ ನೀಡಿದ ಬಸವಣ್ಣ: ಸಂಪನ್ಮೂಲ ವ್ಯಕ್ತಿ ಎಸ್.ಬಿ.ಲೀಲಾರಾಣಿ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಸವಣ್ಣ ನೀಡಿದ ಮೌಲ್ಯಯುತವಾದ ವಚನಗಳನ್ನು ಪ್ರತಿ ಮನೆಗಳಲ್ಲಿ ಮಕ್ಕಳಿಗೆ ಬೋಧಿಸುವುದರಿಂದ ವ್ಯಕ್ತಿಗತ ಸುಧಾರಣೆಯಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಎಸ್.ಬಿ.ಲೀಲಾರಾಣಿ ಸಲಹೆ ನೀಡಿದರು.

ನಗರದ ಗಾಂಧಿಭವನದಲ್ಲಿ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಂಘದಿಂದ ಆಯೋಜಿಸಿದ್ದ ಬಸವ ಜ್ಯೋತಿಯ 133ನೇ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಶಿಕ್ಷಣಕ್ಕೆ ಮೌಲ್ಯಯುತವಾದ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ವಚನಗಳು ನನ್ನ ಪ್ರಾಣ ಇದ್ದಂತೆ ಅದನ್ನು ಸಂರಕ್ಷಿಸುವ ಹೊಣೆ ನಿಮ್ಮೆಲ್ಲರದ್ದು ಎಂದು ಬಸವಣ್ಣ ಹೇಳಿದ್ದಾರೆ. ಅವರ ಮಾತನ್ನು ಪಾಲಿಸುವುದು ಶಿವಶರಣರು ಹಾಗೂ ಬಸವಣ್ಣನವರ ಅನುಯಾಯಿಗಳಿಗೆ ಒಂದು ಗುರುತರವಾದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಡೇನಹಳ್ಳಿ ತೋಂಟದಾರ್ಯ ಮಠದ ಇಮ್ಮಡಿ ಸದಾಶಿವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ನಾಗರಾಜು ವಹಿಸಿದ್ದರು. ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ನಿರ್ದೇಶಕ ಶಿವಕುಮಾರ್, ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ರುದ್ರಸ್ವಾಮಿ, ಬಿ.ಎಂ.ಮಹದೇವಸ್ವಾಮಿ, ಎಂ.ಪಿ.ಭಾಗ್ಯಮ್ಮ, ನಾಗಭೂಷಣ್, ಕೆ.ದ್ಯಾವಯ್ಯ, ಜಗದೀಶ್ ದೇವನೂರು ಇತರರಿದ್ದರು.