ಜಿಲ್ಲೆ

ಕತ್ತಲೆ ಕಳೆಯುವ ದೀಪೋತ್ಸವ

ಪ್ರಶಾಂತ ಹೂಗಾರ

ಬೋರಗಾಂವ: ಭಕ್ತರು ದೀಪೋತ್ಸವಗಳಲ್ಲಿ ಭಾಗಿಯಾಗುವ ಮೂಲಕ ಬದುಕಿನ ಅಂಧಕಾರ ಕಳೆದುಕೊಳ್ಳಬೇಕು ಎಂದು ಸಿದ್ಧಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಬಿದರಳ್ಳಿ ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದೀಪೋತ್ಸವ ನಿಮಿತ್ತ ಬೆಳಗ್ಗೆ ಶ್ರೀ ಸಿದ್ಧೇಶ್ವರ ದೇವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ಅಣ್ಣಾಸಾಹೇಬ ಶೆಂಡೂರೆ, ಸುರೇಶ ಖರಬುಡೆ, ಗುತ್ತಿಗೆದಾರ ರವಿ ಮಾಳಿ, ಶಂಕರಯ್ಯ ಹಿರೇಮಠ, ದುಂಡಯ್ಯ ಹಿರೇಮಠ, ಬಾಬು ಯಕ್ಸಂಬಿ, ಮಾರುತಿ ಕುರಲೆ, ಶಿದ್ರಾಮ ಮಧಾಳೆ, ಮಾರುತಿ ಗೋಣಿ, ಶಿದ್ರಾಮ ಬಸರಗಿ, ಸೋಮಯ್ಯ ಮಠಪತಿ, ಶಾಮಲಿಂಗ ಕಿಲ್ಲೇದಾರ, ಭರಮಪ್ಪ ಹಿರೇಕುಡಿ ಇತರರಿದ್ದರು.