ಜಿಲ್ಲೆ

ಯುವಕರಿಗೆ ದಾರದೀಪ ‘ಸಿಡಿಲಸಂತ’

ರವಿ ಎಸ್. ಬಳೂಟಗಿ

ನರಗುಂದ: ಯುವಕರಿಗೆ ಸ್ಫೂರ್ತಿಯಾಗಿದ್ದ ವೀರಸನ್ಯಾಸಿ ಸ್ವಾಮಿ ವಿವೇಕಾನಂದ, ಸುಭಾಸಚಂದ್ರ ಬೋಸ್ ಅವರು ಭಾರತದಲ್ಲಿ ಮಿಲಿಟರಿ ಪಡೆ ಕಟ್ಟಿ ಬೆಳೆಸಲು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಬಲಿಷ್ಠ ಭಾರತ ನಿರ್ಮಾಣದಲ್ಲಿ ವಿವೇಕಾನಂದರ ಪಾತ್ರ ಸ್ಮರಣೀಯ ಎಂದು ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಗುಜಮಾಗಡಿ ಹೇಳಿದರು.

ಪಟ್ಟಣದ ಗಾಂಧಿ ವರ್ತುಲದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಭಾರತದ ಪ್ರಸಿದ್ಧ ಹಾಗೂ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಪ್ರಥಮರಾಗಿದ್ದಾರೆ. ನಿರ್ಭಯ, ಆಶಾವಾದ, ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶಾಲವಾದ ದೃಷ್ಟಿಕೋನ ಹೊಂದಿದ್ದರು. ಯುವಕರಿಗೆ ದಾರದೀಪವಾಗಿರುವ ಅವರ ಆದರ್ಶಮಯ ನೇರ ನಡೆ-ನುಡಿಗಳು ಎಂದಿಗೂ ಅಜರಾಮರ ಎಂದು ತಿಳಿಸಿದರು. ಚನ್ನು ನಂದಿ, ಅಶೋಕ ಗುಜಮಾಗಡಿ, ಸಂಗಪ್ಪ ಗೋವೇಶ್ವರ, ರಾಜುಸಿಂಗ್ ಶೇಖಾವತ್, ಬಸವರಾಜ ಸತ್ತಿಗೇರಿ, ಬಾಲಾಜಿ ಗುಜಮಾಗಡಿ, ನಿಂಗಪ್ಪ ಮಂಡಿ, ವಿನಾಯಕ ಜಿಂಗಾಡೆ, ಶಂಕ್ರಪ್ಪ ನಾಗಠಾಣ, ಆನಂದ ಜಿಂಗಾಡೆ, ಬಸವರಾಜ ಗಡೇಕಾರ, ಗುರುಪ್ರಸಾದ ಗುಜಮಾಗಡಿ, ಜಿನೇಂದ್ರ ರೋಖಡೆ, ಹನುಮಂತಪ್ಪ ಮೊಹಿತೆನ್ನವರ, ಇತರರಿದ್ದರು.