ಜಿಲ್ಲೆ

ಬೆಣ್ಗೆರೆಯಲ್ಲಿ ಕಡಲ್ಕೊರೆತ

Avinash R

ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಎರಡು ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿ ಮಳೆಗೆ ಹಲವೆಡೆ ಕಡಲ್ಕೊರೆತದ ತೀವ್ರತೆ ಮತ್ತಷ್ಟು ಹೆಚ್ಚಾಗುತ್ತಿದೆ.

ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಬೆಣ್ಗೆರೆಯಲ್ಲಿ ಅಲೆಗಳು ಕಡಲತೀರಕ್ಕೆ ಅಪ್ಪಳಿಸುತ್ತಿದ್ದು, ಬಹುತೇಕ ಭೂಭಾಗ ಕಡಲ ಒಡಲಿಗೆ ಸೇರಿಸಿಕೊಂಡಿವೆ. ಕಡಲತೀರದಲ್ಲಿರುವ ತೆಂಗಿನ ಮರ, ಮನೆ ಹಾಗು ಮೀನುಗಾರಿಕೆ ದೋಣಿಗಳು ಅಪಾಯದಂಚಿನಲ್ಲಿದೆ. ನಾಡದೋಣಿ ಆರಂಭವಾಗದ ಹಿನ್ನೆಲೆಯಲ್ಲಿ ಮೀನುಗಾರರು ದೋಣಿಗಳನ್ನು ಮೀನುಗಾರಿಕೆಗೆ ಸಜ್ಜುಗೊಳಿಸಿಲ್ಲ. ಇದೀಗ ಕಡಲ್ಕೊರೆತ ಹೆಚ್ಚಾಗುತ್ತಿರುವುದರಿಂದ ದೋಣಿಗಳು ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.