ಹುಬ್ಬಳ್ಳಿ: ಇಲ್ಲಿಯ ನಾರ್ಥ್ ಕರ್ನಾಟಕ ವುಮೆನ್ಸ್ ಫೌಂಡೇಷನ್ ವತಿಯಿಂದ ದಸರಾ ಅಂಗವಾಗಿ ದಾಂಡಿಯಾ ನೃತ್ಯ ಉತ್ಸವವನ್ನು ನಗರದ ಸ್ಟೇಷನ್ ರಸ್ತೆಯಲ್ಲಿರುವ ದಿಗಂಬರ ಜೈನ್ ಬೋರ್ಡಿಂಗ್ ನಲ್ಲಿ ಅಕ್ಟೋಬರ್ 29ರಂದು ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಅಶ್ವಿನಿ ಕುಬಸದ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು, ಮಹಿಳೆಯರು ಸೇರಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಬೆಸ್ಟ್ ದಾಂಡಿಯಾ, ಬೆಸ್ಟ್ ಗರಭಾ, ಬೆಸ್ಟ್ ಡ್ರೆಸ್ ವಿಭಾಗದಲ್ಲಿ ನಿರ್ಣಾಯಕರು ಆಯ್ಕೆ ಮಾಡಿ ತೀರ್ಪು ನೀಡುವರು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. 10 ವರ್ಷದೊಳಗಿನವರಿಗೆ ಬೆಸ್ಟ್ ಚಿಲ್ಡರನ್ಸ್ ಅವಾರ್ಡ್ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸ್ಪರ್ಧೆಯ ಮಧ್ಯದಲ್ಲಿ ಹಾಡು ಸೇರಿದಂತೆ ವಿವಿಧ ಬಗೆಯ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಶಾರದಾ ಬಡಿಗೇರ, ಲಕ್ಷ್ಮಿ ಕುದರಿ, ವಂದನಾ ಕರಾಳೆ, ವೀಣಾ ಪರಮಾಧಿ ಗೋಷ್ಠಿಯಲ್ಲಿದ್ದರು.