ಜಿಲ್ಲೆ

ಅ.21ಕ್ಕೆ ಉಡುಪಿ ಎಂಜಿಎಂ ಮೈದಾನದಲ್ಲಿ ದಾಂಡಿಯಾ ನೃತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಡಿಯಾಳಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಹಿಳಾ ತಂಡದ ನೇತೃತ್ವದಲ್ಲಿ ಎಂಜಿಎಂ ಮೈದಾನದಲ್ಲಿ ಅ.21ರಂದು ಸಾಯಂಕಾಲ 6 ಗಂಟೆಯಿಂದ ಆರನೇ ವರ್ಷದ" ಉಡುಪಿ ದಾಂಡಿಯ&2023 ನಡೆಯಲಿದೆ ಎಂದು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುಜರಾತಿನ ಸಾಂಪ್ರದಾಯಿಕ ದಾಂಡಿಯ ನೃತ್ಯಕ್ಕೆ ಕರಾವಳಿಯಲ್ಲಿ ಉತ್ತೇಜನ ನೀಡುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಳೆದ ಬಾರಿ ಸುಮಾರು 3000 ಮಹಿಳೆಯರು ದಾಂಡಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಾರಿ ಸುಮಾರು 6000 ಮಹಿಳೆಯರು ನೃತ್ಯದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ನೃತ್ಯದಲ್ಲಿ 10 ವರ್ಷದ ಕೆಳಗಿನ ಬಾಲಕರಿಗೆ ಮತ್ತು ಬಾಲಕಿಯರಿಗೆ ಉತ್ತಮ ಡಾನ್ಸ್​ ಮತ್ತು ಉತ್ತಮ ಉಡುಗೆ, ಪ್ರತ್ಯೇಕವಾಗಿ ವಿವಿಧ ವಿಭಾಗಗಳಲ್ಲಿ ಬಹುಮಾನವನ್ನು ನೀಡಲಾಗುವುದು. ಅತ್ಯುತ್ತಮ ನೃತ್ಯ, ವೇಷಭೂಷಣ, ಉತ್ತಮ ಜೋಡಿ ನೃತ್ಯ, ಮತ್ತು ಗುಂಪು ನೃತ್ಯಕ್ಕೆ ಬಹುಮಾನ ಇರಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆಹಾರ ಮೇಳ ವಿಶೇಷ ಅಕರ್ಷಣೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಕೇಂದ್ರ ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಉದ್ಘಾಟಿಸಲಿದ್ದಾರೆ.

ಆಭರಣ ಜ್ಯುವೆರ್ಲಸ್​ ಸಂಧ್ಯಾ.ಎಸ್​.ಕಾಮತ್​, ಜಯಲಕ್ಷ್ಮಿ ಸಿಲ್ಕ್​ ನ ಜಯಲಕ್ಷ್ಮಿವಿ.ಹೆಗ್ಡೆ ಮತ್ತು ಅಪರ್ಣಾ ಆರ್​.ಹೆಗ್ಡೆ, ಪವರ್​ ಸಂಸ್ಥೆಯ ಅಧ್ಯಕ್ಷೆ ಸುವರ್ಷ ಭಾಗವಹಿಸಲಿದ್ದಾರೆ ಎಂದರು.

ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್​ ಕುಲಾಲ್​ ಕಡಿಯಾಳಿ, ದಾಂಡಿಯ ಸಮಿತಿಯ ಸದಸ್ಯರುಗಳಾದ ಆಶಾ.ವಿ.ಭಟ್​, ಸುಜಲ ಸುವರ್ಣ, ದೀಪಾ ಕರ್ಕಿ ಉಪಸ್ಥಿತರಿದ್ದರು.