ಜಿಲ್ಲೆ

ಆ.19 ರಿಂದ ದಾಂಡೇಲಿ ನಗರಸಭೆ ಎದುರು ಧರಣಿ

ಕಾರವಾರ:ದಾಂಡೇಲಿಯ ಜಿ ಪ್ಲಸ್2 ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿರುವುದನ್ನು ವಿರೋಧಿಸಿ ಆ.19 ರಿಂದ ದಾಂಡೇಲಿ ನಗರಸಭೆಯ ಎದುರು ಕುಳಿತು ಪ್ರತಿಭಟನೆ ನಡೆಸಲಾಗುವುದು ಎಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಅವಾಸ್ ಯೋಜನೆಯಡಿ ಕೆಎಚ್‌ಬಿ ಹಾಗೂ ದಾಂಡೇಲಿ ನಗರಸಭೆಯಿಂದ ಜಿ ಪ್ಲಸ್ 2 ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಸುಮಾರು 998 ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ. ಒಟ್ಟು 4.92 ಲಕ್ಷ ರೂ.ಗಳಲ್ಲಿ ಫಲಾನುಭವಿಗಳಿಗೆ ಮನೆ ಲಭ್ಯವಾಗಲಿದೆ. 840 ಜನ ಹಣ ತುಂಬಿದ್ದಾರೆ. ಯೋಜನೆ ಪ್ರಾರಂಭವಾಗಿ 12 ವರ್ಷ ಕಳೆದಿದೆ. ಆದರೆ, ಇದುವರೆಗೆ 75 ಜನರಿಗೆ ಮನೆ ಮಾತ್ರ ಮನೆಗಳನ್ನು ನೀಡಲಾಗಿದೆ. ಇನ್ನೂ 108 ಮನೆಗಳು ಸಿದ್ಧವಾಗುತ್ತಿವೆ. ಆದರೆ, ಉಳಿದವರಿಗೆ ಇನ್ನೂ ವಿಳಂಬವಾಗಿದೆ. ದಾಂಡೇಲಿ ಹೌಸಿಂಗ್ ಬೋರ್ಡ ಜಾಗ ಅತಿಕ್ರಮಣವಾಗುತ್ತಿದೆ. ಇವುಗಳ ಬಗ್ಗೆ ದಾಂಡೇಲಿ ನಗರಸಭೆಗೆ ಸಾಕಷ್ಟು ದೂರು ನೀಡಿದರೂ ಪ್ರಯೋಜನವಾಗದ ಕಾರಣ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಅಶೋಕ ಪಾಟೀಲ, ಮುಜಿಬಾ ಛಬ್ಬಿ, ಶಹೆಜಾದಿ ಕುಲಶಾಪುರ, ಮಹಮ್ಮದ್ ಗೌಸ್ ಬೆಟಗೇರಿ, ಫಾರುಕ್ ಶೇಕ್, ಮೊಹಮ್ಮದ್ ಗೌಸ್ ಪಟೇಲ್, ಶಾಮ್ ಬೆಂಗಳೂರು, ಇಕ್ಬಾಲ್ ಪೀರಜಾದೆ, ಯಲ್ಲಪ್ಪಾ, ಎಲ್ಲಮ್ಮಾ ಡಮಾಮ್, ಪ್ರೇಮಲತಾ ಚೊಖಡಾ, ಸುನಿತಾ ವಾಸಕರ, ಫೈರೋಜಾ ಧಾರವಾಡಕರ್ ಸುದ್ದಿಗೋಷ್ಠಿಯಲ್ಲಿದ್ದರು.

ದಾಂಡೇಲಿ ಸಮಗ್ರ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಗಡೆಪ್ಪನವರ ಮಾತನಾಡಿ, ದಾಂಡೇಲಿ ತಾಲೂಕು ರಚನೆಯಾಗಿ ಹಲವು ವರ್ಷವಾಗಿದೆ. ಆದರೆ, ಇದುವರೆಗೂ ಪ್ರತ್ಯೇಕ ತಾಲೂಕು ಆರೋಗ್ಯಾಽಕಾರಿ, ಬಿಇಒ, ಸಬ್ ರಿಜಿಸ್ಟ್ರಾರ್ ಮುಂತಾದ ಕಚೇರಿಗಳು ಮಂಜೂರಾಗಿಲ್ಲ. ಸೌಲಭ್ಯಕ್ಕಾಗಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯಿಸುತ್ತದೆ ಎಂದರು.