ಜಿಲ್ಲೆ

ದಾಂಡಿಯಾ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಜನತೆ: ಖುಷಿಪಟ್ಟ ಹಿರಿಯ ನಾಗರಿಕರು

ಬೆಂಗಳೂರು: ನವರಾತ್ರಿ ನಿಮಿತ್ತ ಮಂಜೀರಾಮ್ ಗ್ರೂಪ್ಸ್ ಹಾಗೂ ‘ವಿಜಯವಾಣಿ’ ವಾಧ್ಯಮ ಸಹಯೋಗದಲ್ಲಿ ನಗರದ ಮಹಾಲಕ್ಷ್ಮೀ ಲೇಔಟ್‌ನ ಇಸ್ಕಾನ್ ದೇಗುಲ ಮುಂಭಾಗದ ರಾಣಿ ಅಬ್ಬಕ್ಕ ಕ್ರೀಡಾಂಗಣದಲ್ಲಿ 3 ದಿನಗಳಿಂದ ಆಯೋಜಿಸಲಾಗಿದ್ದ ‘ಬೆಂಗಳೂರು ದಾಂಡಿಯಾ ಉತ್ಸವ’ಕ್ಕೆ ಭಾನುವಾರ ಅದ್ದೂರಿ ತೆರೆಬಿತ್ತು.

ವಿಶೇಷವಾಗಿ ಹಿರಿಯ ನಾಗರಿಕರು ಉತ್ಸವದಲ್ಲಿ ಭಾಗಿಯಾಗಿ ದಾಂಡಿಯಾ ನತ್ಯ ವಾಡಿದರು. ಯುವಕ- ಯುವತಿಯರು ನಾಚುವಂತೆ ಹೆಜ್ಜೆ ಹಾಕಿದ್ದು ಗಮನಾರ್ಹ. ವಾರಾಂತ್ಯ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಆಯಾ ಭಾಷೆಯ ಗೀತೆಗಳಿಗೆ ಹೆಜ್ಜೆ ಹಾಕಿ ಖುಷಿಪಟ್ಟರು. ಮಿಹಿರ್ ಜೋಷಿ ಅವರ ಗಾಯನಕ್ಕೆ ಸಭಿಕರು ಮನಸೋತರು.

ಕಾರ್ಯಕ್ರಮದ ಆಯೋಜಕ ಶ್ರೀವತ್ಸ ವಾತನಾಡಿ, ಸತತ 8 ವರ್ಷಗಳಿಂದ ಬಾಗಲಕೋಟೆಯಲ್ಲಿ ಕೃಷ್ಣಜನ್ಮಾಷ್ಟಮಿ, ಕನ್ನಡ ರಾಜ್ಯೋತ್ಸವ ಸೇರಿ ಹಬ್ಬದ ಋತುವಿನ ಸಂದರ್ಭದಲ್ಲಿ ದಾಂಡಿಯಾ, ಹೋಳಿ ಉತ್ಸವ, ಮೊಸರು ಗಡಿಗೆ ಒಡೆಯುವಿಕೆ ಸೇರಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಉತ್ತರ ಭಾರತದ ಪ್ರಸಿದ್ಧ ನೃತ್ಯಗಳಾದ ದಾಂಡಿಯಾ ಮತ್ತು ಗಾರ್ಭಾ ನತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಉತ್ಸವ ಆಯೋಜಿಸಲಾಗಿತ್ತು ಎಂದು ಹೇಳಿದರು.

ಮಂಜೀರಾಮ್ ಗ್ರೂಪ್ಸ್‌ನ ಸಂದೇಶ್ ಸಾಳುಂಕೆ, ಕೇಶವ್ ದೊಂಗಡಿ, ವಿಕಾಸ್ ವಿಜೆ, ಸಂಗಮೇಶ್ ಹದ್ಲಿ, ಬದರಿ ಕಾಕಂಡಿಕಿ ಇತರರಿದ್ದರು.

ಮೊದಲ ಬಾರಿಗೆ ಬೆಂಗಳೂರಿನಲ್ಲಿ ದಾಂಡಿಯಾ ಉತ್ಸವ ಆಯೋಜಿಸಿದ್ದೆವು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬರುವ ವರ್ಷದಿಂದ ರಾಜಧಾನಿಯಲ್ಲಿ ಹಬ್ಬದ ಸಂದರ್ಭದಲ್ಲಿ ದಾಂಡಿಯಾ ವಾತ್ರವಲ್ಲದೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ. 2026ರ ಜನವರಿಯಲ್ಲಿ ಕವಿ ಕುವಾರ್ ವಿಶ್ವಾಸ್ ಅವರಿಂದ ರಾಮ ಕಥಾ ಕಾರ್ಯಕ್ರಮ ಆಯೋಜಿಸಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವೆ.

| ದರ್ಶನ್ ಕುವಾರ್ ಎಡಕೆ, ಕಾರ್ಯಕ್ರಮದ ಆಯೋಜಕ, ಮಂಜೀರಾಮ್ ಗ್ರೂಪ್ಸ್ ಸಂಸ್ಥಾಪಕ.