ಕುಂದನ್ ನೃತ್ಯಾಲಯ ತಂಡ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ ತಂಡದಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ. 
ಜಿಲ್ಲೆ

ಮನಸೂರೆಗೊಳಿಸಿದ ನೃತ್ಯ ಕಾರ್ಯಕ್ರಮ

ನಾಗೇಶ ಎಸ್

ಸುಂಟಿಕೊಪ್ಪ: ವಿಶ್ವ ಹಿಂದು ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮಮಂದಿರದಲ್ಲಿ ನಡೆಯುತ್ತಿರುವ 60ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಇತ್ತೀಚೆಗೆ ಕುಂದನ್ ನೃತ್ಯಾಲಯ ತಂಡ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ ತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಎಲ್ಲರನ್ನು ಮನಸೂರೆಗೊಳಿಸಿತು.

ಗಣೇಶ ಸ್ತೋತ್ರದ ನಾಟ್ಯದೊಂದಿಗೆ ಆರಂಭಗೊಂಡ ನೃತ್ಯ ಕಲಾ ವೈಭವ ಅತ್ಯಕರ್ಷಣೀಯವಾಗಿ ಮೂಡಿಬಂದಿತು. ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ಕರ್ನಾಟಕದ ಇತಿಹಾಸದಲಿ, ಮೂಷಿಕ ವಾಹನ, ಬ್ರಹ್ಮ ಮುಖ, ಕಾಂತಾರ ಸೇರಿದಂತೆ ಹತ್ತಾರು ಹಾಡಿಗೆ ಭರತನಾಟ್ಯದ ಮೂಲಕ ಎಲ್ಲರನ್ನು ಮನರಂಜಿಸಲಾಯಿತು. ಕೊನೆಯಲ್ಲಿ ಕಥಕ್ಕಳಿ ಮೂಲಕ ಮುಕ್ತಾಯಗೊಳಿಸಲಾಯಿತು.

ಕುಂದನ್ ನೃತ್ಯಾಲಯದ ವಿನುತಾ ಹೇಮಂತ್ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ ರಶ್ಮಿ ಶಿವಕುಮಾರ್ ನೇತೃತ್ವದ ತಂಡ ಮನಮೋಹಕ ಭರತನಾಟ್ಯದ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು. ನಂತರ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು.