ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಉಪಾಧ್ಯೆ ನೃತ್ಯ ವಿಹಾರದ 70ನೇ ವರ್ಷದ ಸಂದರ್ಭದಲ್ಲಿ ಡಿ. 22ರಿಂದ 27ರವರೆಗೆ ಸಂಜೆ 7 ಗಂಟೆಗೆ ಮಾಳಮಡ್ಡಿಯ ಸೀತಾರಾಮ ಮಂದಿರದಲ್ಲಿ ನೃತ್ಯಸಪ್ತಾಹ ಆಯೋಜಿಸಲಾಗಿದೆ ಎಂದು ನಾಗೇಶ ಶಾನಭಾಗ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ವಕೀಲ ಅರುಣ ನೀಲೋಪಂತ ಉದ್ಘಾಟಿಸುವರು. ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅನಂತ ಥಿಟೆ ಅತಿಥಿಯಾಗಿ ಪಾಲ್ಗೊಳ್ಳುವರು. 22ರಂದು ನಿಽ ದೇಶಪಾಂಡೆ, 23ರಂದು ಪಾರ್ವತಿ ದೀಕ್ಷಿತ್, 24ರಂದು ಐಶ್ವರ್ಯ ವಾಲಿಕಾರ, 25ರಂದು ದಿವ್ಯಾ ಪಾಟೀಲ, 26ರಂದು ನಯನತಾರಾ ಮುಗದೂರ, 27ರಂದು ದಿಶಾ ಸಾಹು ಸಪ್ತಾಹದಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶಿಸುವರು ಎಂದರು.
28ರAದು ಸಂಜೆ 5.30ಕ್ಕೆ ಸೃಜನಾ ರಂಗಮ0ದಿರದಲ್ಲಿ ಸಮಾರೋಪ ಜರುಗುವುದು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಉದ್ಘಾಟಿಸುವರು. ನೃತ್ಯ ವಿಹಾರದ ಅಧ್ಯಕ್ಷ ವಿದ್ವಾನ್ ನಟರಾಜ ಉಪಾಧ್ಯಾಯ ಅಧ್ಯಕ್ಷತೆ ವಹಿಸುವರು. ಬೆಳಗಾವಿಯ ರವಿ ನೃತ್ಯಕಲಾ ನಿರ್ದೇಶಕ ವಿದ್ವಾನ್ ಟಿ. ರವೀಂದ್ರ ಶರ್ಮಾ ಅವರನ್ನು ಸನ್ಮಾನಿಸಲಾಗುವುದು ಎಂದರು.
ನಟರಾಜ ಉಪಾಧ್ಯಾಯ, ಪ್ರಮೋದಾ ಉಪಾಧ್ಯಾಯ ಸುದ್ದಿಗೋಷ್ಠಿಯಲ್ಲಿದ್ದರು.