ಜಿಲ್ಲೆ

ನೃತ್ಯ ಸ್ಪರ್ಧೆ: ಕಿಂಗ್ಸ್ ಆಫ್ ಕೂರ್ಗ್ ದ್ವಿತೀಯ

ಆದರ್ಶ್. ಎಂ.ಕೆ.

ಮಡಿಕೇರಿ: ಮೈಸೂರಿನ ಜಗನ್‌ಮೋಹನ ಪ್ಯಾಲೇಸ್‌ನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ದ್ವಿತೀಯ ಸ್ಥಾನಗಳಿಸಿದೆ.


ಡಿವೈನ್ ಡ್ಯಾನ್ಸ್ ಅಕಾಡೆಮಿ ಪುನಿತ್‌ರಾಜ್‌ಕುಮಾರ್ ಸ್ಮರಣಾರ್ಥ ನಡೆಸಿದ ಸ್ಪರ್ಧೆ ಹಾಗೂ ಮಂಜುಶ್ರೀ ಸ್ಟೆಪ್ಸ್ ನಡೆಸಿದ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕಿಂಗ್ಸ್ ಆಫ್ ಕೂರ್ಗ್ ತಂಡ ಸಬ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನಗಳಿಸಿದೆ.

ನೃತ್ಯ ಸಂಸ್ಥೆಯ ತರಬೆತುದಾರರಾದ ಮಹೇಶ್, ಕಿರಣ್‌ರವರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಕನ್ನಿಕೆ, ಮೊಶಿಕಾ, ಯಶಿಕಾ, ಶ್ರೇಯ, ರಿಯಾಂಕ, ಒಸಿನ್, ಪ್ರಜ್ವಲ್, ಮುತ್ತಮ್ಮ, ಸೋನಾಕ್ಷಿ, ಶ್ರೀರಕ್ಷಾ, ಯಾದ್ವಿತಾ, ಕಿಶನ್, ದೀಪಿಕ್ಷಾ, ವಿಸ್ಮಯ, ಪ್ರೇಕ್ಷಿತಾ, ನಿರನ್, ಇಶಾಂತ್ ನೃತ್ಯ ಪ್ರದರ್ಶನ ಮಾಡಿದರು.