ಜಿಲ್ಲೆ

ನೃತ್ಯ ಸಂಭ್ರಮ ಏ. 9ರಂದು

ರವಿ ಎಸ್. ಬಳೂಟಗಿ

ಧಾರವಾಡ: ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಏ. 9ರಂದು ಸಂಜೆ 5.30ಕ್ಕೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ‘ನೃತ್ಯ ಸಂಭ್ರಮ’ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. ರತಿಕಾ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ನಾಗರತ್ನ ಹಡಗಲಿ ಉದ್ಘಾಟಿಸುವರು. ಡಾ. ರಾಜನ ದೇಶಪಾಂಡೆ, ವಿದುಷಿ ಪ್ರಮೋದಾ ಉಪಾಧ್ಯಾಯ, ಕುಮಾರ ಬೆಕ್ಕೇರಿ ಅತಿಥಿಗಳಾಗಿ ಆಗಮಿಸುವರು. ಡಾ. ವಿನಾಯಕ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಂಗಳೂರಿನ ಸಂಸ್ಕೃತಿ ನೃತ್ಯ ಅಕಾಡೆಮಿಯ ವಿದುಷಿ ಶೃತಿ ನಾಯಕ ಹಾಗೂ ವಿದುಷಿ ಅಪರ್ಣಾ ದೀಕ್ಷಿತ ಹಾಗೂ ಶಿಷ್ಯ ವೃಂದದವರು ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ. ಜತೆಗೆ ವಿವಿಧ ಕಲಾವಿದರು ಭರತನಾಟ್ಯದ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಸಮೀರ ಜೋಶಿ ತಿಳಿಸಿದ್ದಾರೆ.