ಜಿಲ್ಲೆ

ಮೂಡ್ಲಕಟ್ಟೆಯಲ್ಲಿ ಕುಣಿತ ಭಜನೆ ಕಾರ್ಯಕ್ರಮ

ಇಂದಿರಾ ಎನ್ ಕೆ

ಕುಂದಾಪುರ: ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಲಿತ ಕಲಾ ಸಂಘದ ಆಶ್ರಯದಲ್ಲಿ ಗಣೇಶ ಉತ್ಸವ-2ಕೆ25 ಅಡಿಯಲ್ಲಿ ಕುಣಿತ ಭಜನೆ ಕಾರ್ಯಕ್ರಮ ಜರುಗಿತು.

ಗಣೇಶ ಉತ್ಸವದ ಮೂರನೇ ದಿನದಂದು ವಿದ್ಯಾರ್ಥಿಗಳೇ ಅಲಂಕರಿಸಿದ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಭಜನೆ ಹಾಗೂ ಶ್ಲೋಕಗಳ ಗಾಯನದ ಮೂಲಕ ಕುಣಿತ ಭಜನೆ ಪ್ರದರ್ಶಿಸಲಾಯಿತು. ಚೆಂಡೆ ವಾದನ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಗಣೇಶನ ವಿಸರ್ಜನಾ ಮೆರವಣಿಗೆ ನಡೆಸಲಾಯಿತು.

ಸಂಸ್ಥೆಯ ಅಧ್ಯಕ್ಷರು, ಬ್ರಾೃಂಡ್ ಬಿಲ್ಡಿಂಗ್ ಡೈರೆಕ್ಟರ್, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಲಲಿತ ಕಲಾ ಸಂಘದ ಸಂಯೋಜಕರು ಹಾಗೂ ವಿದ್ಯಾರ್ಥಿ ಸಂಯೋಜಕರು, ಸಂಸ್ಥೆಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಸನ್ನಿಧಿ ಪಿ.ವೈ. ಕಾರ್ಯಕ್ರಮ ನಿರೂಪಿಸಿದರು.