ಜಿಲ್ಲೆ

ಜೀವ ವೈವಿಧ್ಯ ಮಹಾ ಸಮ್ಮೇಳನಕ್ಕೆ ದಾಮೋದರ ತಂಡ

ವೀರೇಶ ಸೌದ್ರಿ

ಭಟ್ಕಳ: ಅಮೆರಿಕದ ಕೊಲಂಬಿಯಾದಲ್ಲಿ ಅ. 21ರಿಂದ ನವೆಂಬರ್ 1ರವರೆಗೆ ನಡೆಯುವ ವಿಶ್ವಸಂಸ್ಥೆಯ 16ನೇ ಜೀವ ವೈವಿಧ್ಯ ಮಹಾ ಸಮ್ಮೇಳನದಲ್ಲಿ ಭಾರತೀಯ ಅರಣ್ಯ ಸೇವೆಯ ಹಿರಿಯ ಅಧಿಕಾರಿ ಕನ್ನಡಿಗ ಎ.ಟಿ. ದಾಮೋದರ ನೇತೃತ್ವದ 13 ಸದಸ್ಯರ ತಂಡ ಪಾಲ್ಗೊಳ್ಳಲಿದೆ.

ಭಟ್ಕಳದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಎ.ಟಿ. ದಾಮೋದರ ಅವರು ಮೂಲತಃ ಸಾಗರ ತಾಲೂಕಿನ ನಾಗವಳ್ಳಿ ನಿವಾಸಿ. ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ ಅವರ ಅಳಿಯ. ಅರುಣಾಚಲ ಪ್ರದೇಶ ರಾಜ್ಯದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಲಸ ಮಾಡುವುದರ ಜತೆಗೆ ಅಲ್ಲಿಯ ಜೀವಗೋಳ ಮೀಸಲು ಸಂಕೀರ್ಣಗಳ ನಿರ್ದೇಶಕ ಹಾಗೂ ರಾಷ್ಟ್ರೀಯ ಹುಲಿ ಸಂಯೋಜನೆ ಮುಖ್ಯಸ್ಥರ ಜವಾಬ್ದಾರಿಯನ್ನು ಎ.ಟಿ. ದಾಮೋದರ ಹೊಂದಿದ್ದಾರೆ.

ಅವರು ಭಾರತದ ರಾಜತಾಂತ್ರಿಕ ರಾಯಭಾರ ಪ್ರತಿನಿಧಿಯಾಗಿ ಜೀವ ವೈವಿಧ್ಯ ಮಹಾ ಸಮ್ಮೇಳನದಲ್ಲಿ ಮಾತನಾಡಲಿದ್ದಾರೆ.