ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಗುರುವಾರ ವಿದ್ಯುತ್ ಕಂಬದಲ್ಲಿ ಹೈ ಟೆನ್ಷನ್ ತಂತಿಯ ತಗುಲಿ ಮೃತಪಟ್ಟಿರುವುದು. 
ಜಿಲ್ಲೆ

ಹೈ ಟೆನ್ಷನ್ ತಂತಿಯ ತಗುಲಿ ವ್ಯಕ್ತಿಯೋರ್ವ ಸಾವು

ಕುರುಗೋಡು: ಪಂಪಸೆಟ್ ಲೈನ್‌ಗೆ ವಿದ್ಯುತ್ ಪಡೆಯಲು ಕಂಬ ಏರಿದ್ದ ವ್ಯಕ್ತಿಯೋರ್ವ ಕರೆಂಟ್ ಶಾಕ್ ಹೊಡೆದು ರುಂಡ-ಮುಂಡ ಬೇರಾದ ದುರ್ಘಟನೆ ತಾಲೂಕಿನ ದಮ್ಮೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ವ್ಯಕ್ತಿ ಭದ್ರ (35) ಎಂಬಾತ ಮೃತ ದುರ್ದೈವಿ.

ರೆಂಟ್ ತೀವ್ರತೆಗೆ ವ್ಯಕ್ತಿಯ ರುಂಡ ತುಂಡು

ಬೆಳಗ್ಗೆ 6 ಗಂಟೆಗೆ ಪಂಪಸೆಟ್ ಲೈನ್‌ಗೆ ವಿದ್ಯುತ್ ಪಡೆಯಲು ಕಂಬ ಏರಿದಾಗ ಹೈ ಟೆನ್ಷನ್ ತಂತಿಯ ತಗುಲಿ ಕರೆಂಟ್ ತೀವ್ರತೆಗೆ ವ್ಯಕ್ತಿಯ ರುಂಡ ತುಂಡಾಗಿ ನೆಲಕ್ಕೆ ಬಿದ್ದಿದೆ. ಉಳಿದ ದೇಹದ ಭಾಗ ಕಂಬದಲ್ಲೆ ನೇತಾಡುವ ಸ್ಥಿತಿ ಜನರಲ್ಲಿ ಭಯ ಮೂಡಿಸಿದೆ. ಘಟನಾ ಸ್ಥಳಕ್ಕೆ ಜೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.